Monday, 16th September 2024

ತೆಲಂಗಾಣ: ಭೀಕರ ಮಳೆಗೆ 30 ಮಂದಿ ಸಾವು

ಹೈದರಾಬಾದ್​: ತೆಲಂಗಾಣದಲ್ಲಿ ಸುರಿದ ಭೀಕರ ಮಳೆಗೆ ಸಂಭವಿಸಿದ ಅನಾಹುತಗಳಲ್ಲಿ 30 ಮಂದಿ ಮೃತಪಟ್ಟಿರುವುದಾಗಿ ಬುಧವಾರ ವರದಿಯಾಗಿದ್ದು, ಅರ್ಧಕ್ಕೂ ಅಧಿಕ ಮಂದಿ ಮೃತ ಪಟ್ಟಿದ್ದಾರೆ.

ಮಳೆಯ ಹೊಡೆತಕ್ಕೆ ರಸ್ತೆಗಳೆಲ್ಲ ಮುಳುಗಿ, ಕಾರುಗಳು ಸಂಪೂರ್ಣ ಮುಳುಗಡೆಯಾಗಿ ನೀರಿನಲ್ಲಿ ಕೊಚ್ಚಿಹೋದ ಮತ್ತು ಕಟ್ಟಡ ಗಳು ಸಂಪೂರ್ಣ ಜಲಾವೃತಗೊಂಡ ದೃಶ್ಯ ಭೀಕರವಾಗಿತ್ತು.

ಹೈದರಾಬಾದ್​ನಲ್ಲಿ ಎರಡು ತಿಂಗಳ ಮಗು ಸೇರಿದಂತೆ 19 ಮಂದಿ ಮೃತಪಟ್ಟಿದ್ದಾರೆ. ರಾತ್ರಿಯಿಡಿ ಸುರಿದ ಮಳೆಗೆ ಕಾಂಪೌಂಡ್​ ಗೋಡೆ ಕುಸಿದು 10 ಮನೆಗಳ ಮೇಲೆ ಬಿದ್ದ ಪರಿಣಾಮ 9 ಮಂದಿ ಸಾವಿಗೀಡಾಗಿದ್ದಾರೆ.

ಪ್ರವಾಹದ ನೀರಿನಲ್ಲಿ ವ್ಯಕ್ತಿಯೊಬ್ಬ ಕೊಚ್ಚಿ ಹೋದ ಭಯಾನಕ ದೃಶ್ಯ ಹೈದರಾಬಾದ್​ನ ಬರ್ಕಾಸ್​ ಏರಿಯಾದಲ್ಲಿ ಕಂಡು ಬಂತು. ರಸ್ತೆ ಪಕ್ಕದಲ್ಲೇ ಇಬ್ಬರು ವ್ಯಕ್ತಿಗಳು ಆಶ್ರಯ ಪಡೆದು ಕೊಂಡಿದ್ದರೂ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಉಳಿಸಲಾಗಸದೇ ಅಸಹಾಯಕತೆ ಯಿಂದ ನೋಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಪ್ರವಾಹದ ಬೆನ್ನಲ್ಲೇ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಮತ್ತು ಆಂಧ್ರ ಸಿಎಂ ಜಗನ್​ ಮೋಹನ್​ ರೆಡ್ಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಾಹಿತಿ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *