ಅಧಿಕಾರಿಗಳು ಒಂದೇ ಒಂದು ಸಿರಿಂಜ್ ಕಳುಹಿಸಿಕೊಟ್ಟಿದ್ದರು ಮತ್ತು ಅದರಲ್ಲೇ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವಂತೆ ವಿಭಾಗದ ಮುಖ್ಯಸ್ಥರು ಆದೇಶಿಸಿದ್ದರು ಎಂದು ಚುಚ್ಚುಮದ್ದುಗಾರ ಜೀತೇಂದ್ರ ಮಾತನಾಡಿರುವ ವಿಡಿಯೋ ಸಾಮಾ ಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read This
ದಕ್ಷಿಣ ಕನ್ನಡದ ಬೆಳ್ಳಾರೆ ಸಂಪೂರ್ಣ ಸ್ತಬ್ಧ: ಸೆಕ್ಷನ್ 144 ಜಾರಿ
http://vishwavani.news/section-144-at-dk/
ಬಿಸಾಡಬಹುದಾದ ಸಿರಿಂಜ್‌ಗಳು, ಏಕ ಬಳಕೆಗಾಗಿ ಮಾತ್ರ ಇದೆ. ಅದನ್ನು ಮತ್ತೊಬ್ಬರಿಗೆ ಬಳಸುವಂತಿಲ್ಲ. ಆದರೆ, ಸಾಮಗ್ರಿ ಗಳನ್ನು ತಲುಪಿಸಿದ ವ್ಯಕ್ತಿ, ಒಂದೇ ಒಂದು ಸಿರಿಂಜ್ ನೀಡಿದ್ದಾನೆ ಎಂದು ಜೀತೇಂದ್ರ, ಪಾಲಕರ ಮುಂದೆಯೇ ಹೇಳಿದ್ದು, ಆತಂಕಗೊಂಡ ಪಾಲಕರು ಅದನ್ನು ರೆಕಾರ್ಡ್ ಮಾಡಿದ್ದಾರೆ.
ಕೇವಲ ಒಂದು ಸಿರಿಂಜ್ ಅನ್ನು ಬಳಸಬೇಕೇ ಎಂದು ಅಧಿಕಾರಿಗಳನ್ನು ಕೇಳಿದೆ. ಅದಕ್ಕೆ ಅವರು ‘ಹೌದು’ ಎಂದು ಹೇಳಿದರು. ಹೀಗಿರುವಾಗ ಇದು ನನ್ನ ತಪ್ಪು ಹೇಗಾಗುತ್ತದೆ? ನಾನು ಏನು ಮಾಡಬೇಕೆಂದು ಕೇಳಿಕೊಂಡೆನೋ ಅದನ್ನು ಮಾಡಿದ್ದೇನೆ ಎಂದು ಉಡಾಫೆಯ ಉತ್ತರ ನೀಡಿದ್ದಾನೆ.
ಸಾಗರ್ ನಗರದ ಜೈನ್ ಪಬ್ಲಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ಶಿಬಿರದ ವೇಳೆ ಈ ಘಟನೆ ನಡೆದಿದೆ. ಒಂದೇ ಸಿರಿಂಜ್‌ನಿಂದ ಮಕ್ಕಳಿಗೆ ಲಸಿಕೆ ಹಾಕುತ್ತಿರುವುದನ್ನು ಗಮನಿಸಿದ ಪೋಷಕರು ಆತಂಕ ವ್ಯಕ್ತಪಡಿಸಿದರು.