Sunday, 15th December 2024

ಒಂದೇ ಸಿರಿಂಜ್​ನಲ್ಲಿ 30 ವಿದ್ಯಾರ್ಥಿಗಳಿಗೆ ಲಸಿಕೆ..!

ಭೋಪಾಲ್​: ಮಧ್ಯ ಪ್ರದೇಶದ ಸಾಗರ್​ ಜಿಲ್ಲೆಯಲ್ಲಿ ಒಂದೇ ಸಿರಿಂಜ್​ನಲ್ಲಿ 30 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ಕಾರ್ಯ ವಿಧಾನವನ್ನು ಉಲ್ಲಂಘಿಸಿದ್ದಲ್ಲದೆ, ಚುಚ್ಚುಮದ್ದುಗಾರ ಉಡಾಫೆ ಉತ್ತರ ನೀಡಿದ್ದಾನೆ.

ಅಧಿಕಾರಿಗಳು ಒಂದೇ ಒಂದು ಸಿರಿಂಜ್​ ಕಳುಹಿಸಿಕೊಟ್ಟಿದ್ದರು ಮತ್ತು ಅದರಲ್ಲೇ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವಂತೆ ವಿಭಾಗದ ಮುಖ್ಯಸ್ಥರು ಆದೇಶಿಸಿದ್ದರು ಎಂದು ಚುಚ್ಚುಮದ್ದುಗಾರ ಜೀತೇಂದ್ರ ಮಾತನಾಡಿರುವ ವಿಡಿಯೋ ಸಾಮಾ ಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Read This

ದಕ್ಷಿಣ ಕನ್ನಡದ ಬೆಳ್ಳಾರೆ ಸಂಪೂರ್ಣ ಸ್ತಬ್ಧ: ಸೆಕ್ಷನ್ 144 ಜಾರಿ

http://vishwavani.news/section-144-at-dk/

ಬಿಸಾಡಬಹುದಾದ ಸಿರಿಂಜ್‌ಗಳು, ಏಕ ಬಳಕೆಗಾಗಿ ಮಾತ್ರ ಇದೆ. ಅದನ್ನು ಮತ್ತೊಬ್ಬರಿಗೆ ಬಳಸುವಂತಿಲ್ಲ. ಆದರೆ, ಸಾಮಗ್ರಿ ಗಳನ್ನು ತಲುಪಿಸಿದ ವ್ಯಕ್ತಿ, ಒಂದೇ ಒಂದು ಸಿರಿಂಜ್ ನೀಡಿದ್ದಾನೆ ಎಂದು ಜೀತೇಂದ್ರ, ಪಾಲಕರ ಮುಂದೆಯೇ ಹೇಳಿದ್ದು, ಆತಂಕಗೊಂಡ ಪಾಲಕರು ಅದನ್ನು ರೆಕಾರ್ಡ್​ ಮಾಡಿದ್ದಾರೆ.

ಕೇವಲ ಒಂದು ಸಿರಿಂಜ್ ಅನ್ನು ಬಳಸಬೇಕೇ ಎಂದು ಅಧಿಕಾರಿಗಳನ್ನು ಕೇಳಿದೆ. ಅದಕ್ಕೆ ಅವರು ‘ಹೌದು’ ಎಂದು ಹೇಳಿದರು. ಹೀಗಿರುವಾಗ ಇದು ನನ್ನ ತಪ್ಪು ಹೇಗಾಗುತ್ತದೆ? ನಾನು ಏನು ಮಾಡಬೇಕೆಂದು ಕೇಳಿಕೊಂಡೆನೋ ಅದನ್ನು ಮಾಡಿದ್ದೇನೆ ಎಂದು ಉಡಾಫೆಯ ಉತ್ತರ ನೀಡಿದ್ದಾನೆ.

ಸಾಗರ್​ ನಗರದ ಜೈನ್ ಪಬ್ಲಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ಶಿಬಿರದ ವೇಳೆ ಈ ಘಟನೆ ನಡೆದಿದೆ. ಒಂದೇ ಸಿರಿಂಜ್‌ನಿಂದ ಮಕ್ಕಳಿಗೆ ಲಸಿಕೆ ಹಾಕುತ್ತಿರುವುದನ್ನು ಗಮನಿಸಿದ ಪೋಷಕರು ಆತಂಕ ವ್ಯಕ್ತಪಡಿಸಿದರು.