Wednesday, 23rd October 2024

Bomb Threat : ‘ತೋಳ ಬಂತು ಕತೆಯಾಯ್ತು’ ವಿಮಾನಗಳಿಗೆ ಬಾಂಬ್‌ ಬೆದರಿಕೆ! 32 ಪ್ರಕರಣಗಳಲ್ಲಿ ಒಂದು ವಿಮಾನವಷ್ಟೇ ತುರ್ತು ಭೂಸ್ಪರ್ಶ

bomb threat

ನವದೆಹಲಿ: ಭಾರತದ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ 32 ವಿಮಾನಗಳಿಗೆ ಶನಿವಾರ ಒಂದೇ ದಿನ ಬಾಂಬ್ ಬೆದರಿಕೆಗಳು (Bomb Threat) ಬಂದಿವೆ. ಇದು ವಿಮಾನ ನಿಲ್ದಾಣಗಳಲ್ಲಿ ತುರ್ತು ತಪಾಸಣೆಗೆ ಕಾರಣವಾದವು. ಆದರೆ, ಒಂದನ್ನು ಮಾತ್ರ ತುರ್ತು ಲ್ಯಾಂಡಿಂಗ್ ಮತ್ತು ತಪಾಸಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತರ ಎಲ್ಲಾ ವಿಮಾನಗಳನ್ನು ಹೋಗಬೇಕಾಗಿದ್ದ ನಿಲ್ದಾಗಳಲ್ಲಿ ಇಳಿದ ನಂತರ ಪರಿಶೀಲಿಸಲಾಯಿತು. ಹೀಗೆ ನಿರಂತವಾಗಿ ವಿಮಾನಳಿಗೆ ಬರುತ್ತಿದ್ದ ಬಾಂಬ್ ಬೆದರಿಕೆ ಕರೆಗಳು ತೋಳ ಬಂತು ಕತೆಯಾಗಿದೆ.

ದೆಹಲಿಯಿಂದ ಲಂಡನ್‌ಗೆ ತೆರಳುತ್ತಿದ್ದ ಯುಕೆ17 ಎಂಬ ‘ವಿಸ್ತಾರಾ ಏರ್‌ಲೈನ್ಸ್‌’ ವಿಮಾನವನ್ನು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ತಿರುಗಿಸಲಾಗಿತ್ತು. ಅಲ್ಲಿ ಎರಡು ಗಂಟೆಗಳ ನಂತರ ಲಂಡನ್‌ಗೆ ತೆರಳುವ ಮೊದಲು ಭದ್ರತಾ ತಪಾಸಣೆ ನಡೆಸಲಾಯಿತು. ವಿಮಾನಗಳು ತಮ್ಮ ಗಮ್ಯಸ್ಥಾನಗಳಲ್ಲಿ ಇಳಿದ ನಂತರ ಹೆಚ್ಚಿನ ಬಾಂಬ್ ಹುಸಿಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏರ್ ಇಂಡಿಯಾ, ಇಂಡಿಗೊ, ಅಕಾಸಾ ಏರ್, ವಿಸ್ತಾರಾ, ಸ್ಪೈಸ್ ಜೆಟ್, ಸ್ಟಾರ್ ಏರ್ ಮತ್ತು ಅಲಯನ್ಸ್ ಏರ್ ಸೇರಿದಂತೆ ಹಲವಾರು ಭಾರತೀಯ ವಿಮಾನಯಾನ ಸಂಸ್ಥೆಗಳು ಹಲವಾರು ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿದವು. ಹೀಗಾಗಿ ವಾಯುಯಾನ ಉದ್ಯಮವು ದುಃಸ್ವಪ್ನ ಎದುರಿಸುವಂತಾಯಿತು. ಕೆಲವು ಸಂದೇಶಗಳನ್ನು ಶೌಚಾಲಯಗಳಲ್ಲಿ ಬರೆಯಲಾಗಿದ್ದು, ಇತರ ಸಂದೇಶಗಳನ್ನು ಸಾಮಾಜಿಕ ಮಾಧ್ಯಮ ಮತ್ತು ಇಮೇಲ್ ಮೂಲಕ ಕಳುಹಿಸಲಾಗಿದೆ. ಆದಾಗ್ಯೂ, ಎಲ್ಲವೂ ಅಂತಿಮವಾಗಿ ಹುಸಿ ಎಂದು ಕಂಡುಬಂದಿದೆ.

ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಶನಿವಾರ ನವದೆಹಲಿಯಲ್ಲಿ ವಿಮಾನಯಾನ ಸಂಸ್ಥೆಗಳ ಸಿಇಒಗಳು ಮತ್ತು ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿತು. ಬಿಸಿಎಎಸ್ ಮಹಾನಿರ್ದೇಶಕ ಜುಲ್ಫಿಕರ್ ಹಸನ್, ಎಲ್ಲಾ ಕಡ್ಡಾಯ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತಿದೆ. ಭಾರತೀಯ ಯಾನವು ಸುರಕ್ಷಿತವಾಗಿದೆ ಎಂದು ಸಭೆಯಲ್ಲಿ ಭರವಸೆ ನೀಡಿದರು.

ಇದನ್ನೂ ಓದಿ: Bomb Threat: 6 ದಿನ..70 ಬೆದರಿಕೆ ಕರೆ; ವಿಮಾನಯಾನ ಸುರಕ್ಷತಾ ಸಂಸ್ಥೆಯಿಂದ ಮಹತ್ವದ ಸಭೆ

“ಭಾರತದ ವಾಯು ಮಾರ್ಗವು ಸಂಪೂರ್ಣವಾಗಿ ಸುರಕ್ಷಿತ. ಪ್ರಸ್ತುತ ಪ್ರೋಟೋಕಾಲ್ (ಪರಿಸ್ಥಿತಿಯನ್ನು ಎದುರಿಸಲು) ದೃಢವಾಗಿದೆ ಮತ್ತು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಪ್ರಯಾಣಿಕರು ಯಾವುದೇ ಭಯವಿಲ್ಲದೆ ಹಾರಬೇಕು ಮತ್ತು ವಾಸ್ತವವಾಗಿ, ಇನ್ನೂ ಹೆಚ್ಚು ಹಾರಬೇಕು ಎಂದು ನಾವು ಭರವಸೆ ನೀಡುತ್ತೇವೆ” ಎಂದು ಜುಲ್ಫಿಕರ್ ಹಸನ್ ಹೇಳಿದರು.

ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆಗಳ ಘಟನೆಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಜಾರಿಗೆ ತರಲು ನಾಗರಿಕ ವಿಮಾನಯಾನ ಸಚಿವಾಲಯ ಯೋಜಿಸಿದೆ.

ವಿಮಾನಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಛತ್ತೀಸ್ ಗಢದ 17 ವರ್ಷದ ಬಾಲಕನನ್ನು ಪೊಲೀಸರು ಕೆಲವು ದಿನಗಳ ಹಿಂದೆ ಬಂಧಿಸಿದ್ದಾರೆ. ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ತನ್ನ 25 ವರ್ಷದ ವ್ಯವಹಾರ ಪಾಲುದಾರನ ಮೇಲೆ ಸೇಡು ತೀರಿಸಿಕೊಳ್ಳುವ ಪ್ರಯತ್ನದಲ್ಲಿ ಅವನು ಕನಿಷ್ಠ 19 ಬೆದರಿಕೆಗಳನ್ನು ಹಾಕಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಇತರ ಬೆದರಿಕೆಗಳ ಮೂಲಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ಕಂಪನಿಗಳು ಮತ್ತು ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ಪೂರೈಕೆದಾರರೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ.