Sunday, 15th December 2024

ಕೋನಾರ್ಕ್ ಎಕ್ಸ್ ಪ್ರೆಸ್ ರೈಲಿನಲ್ಲಿ 32 ಕೆಜಿ ಚಿನ್ನಾಭರಣ ಪತ್ತೆ

ಭುವನೇಶ್ವರ್: ಕೋನಾರ್ಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 32 ಕೆಜಿ ಚಿನ್ನಾಭರಣ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಬಂಗಾರದ ಮೌಲ್ಯ ರೂ. 16 ಕೋಟಿ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ-ಭುವನೇಶ್ವರ ಕೊನಾರ್ಕ್ ಎಕ್ಸ್‌ಪ್ರೆಸ್‌ನಲ್ಲಿ ಜಿಆರ್‌ಪಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಾಲ್ಕು ಮಂದಿ ಪ್ರಯಾಣಿಕರಿಂದ 32 ಕೆಜಿ ಚಿನ್ನ ವಶಕ್ಕೆ ಪಡೆದಿದ್ದಾರೆ. ಚಿನ್ನಾಭರಣ ಸಾಗಿಸುತ್ತಿದ್ದ ವ್ಯಕ್ತಿಗಳು ಆಭರಣಕ್ಕೆ ಸಂಬಂಧಿಸಿದ ಜಿಎಸ್‌ಟಿ ದಾಖಲೆಗಳನ್ನ ಪೊಲಿಸರಿಗೆ ನೀಡಲಿಲ್ಲ.

ಬಂಧಿತ ನಾಲ್ವರನ್ನು ಮುಂಬೈ ಮೂಲದ ಹಸ್ಮುಖಲಾಲ್ ಜೈನ್, ಸುರೇಶ್ ಸಹದೇವ್ ಖರೆ, ಮಹೇಶ್ ಭೋಮ್ಸರ್ ಮತ್ತು ದೀಪಕ್ ಪಟೇಲ್ ಎಂದು ಗುರುತಿಸಲಾಗಿದೆ. ಒಟ್ಟು ನಾಲ್ಕು ಚೀಲಗಳಲ್ಲಿ ತಲಾ 8 ಕೆ.ಜಿ.ಯಷ್ಟು ಚಿನ್ನವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.