Thursday, 12th December 2024

ಗೋದಾಮಿನಲ್ಲಿ ಅಗ್ನಿ ಅವಘಡ: 35 ಕೋಟಿ ರೂ. ಆಸ್ತಿ ನಾಶ

ವಾರಂಗಲ್: ತೆಲಂಗಾಣ ರಾಜ್ಯ ಕೈಮಗ್ಗ ನೇಕಾರರ ಸಹಕಾರಿ ಸೊಸೈಟಿ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 35 ಕೋಟಿ ರೂಪಾಯಿ ಮೌಲ್ಯದ ಆಸ್ತಿ ನಾಶವಾಗಿದೆನ್ನಲಾಗಿದೆ.

ಘಟನೆಯು ವಾರಂಗಲ್ ಜಿಲ್ಲೆಯ ಗೀಸುಕೊಂಡ ಮಂಡಲದ ಧರ್ಮಾರಾಂ ಗ್ರಾಮದಲ್ಲಿ ನಡೆದಿದೆ.

ಗೋದಾಮಿನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವಾಗ ಅಗ್ನಿ ಶಾಮಕ ದಳ ಆಗಮಿಸಿತು. ವಾರಂಗಲ್ ಮತ್ತು ಹನುಮ ಕೊಂಡದಿಂದ ಆರು ಅಗ್ನಿಶಾಮಕ ವಾಹನಗಳು ಬೆಂಕಿ ಯನ್ನು ನಂದಿಸಲು ನಿಯೋಜಿಸಲಾಗಿದೆ.

ಘಟನೆಯಲ್ಲಿ ಸುಮಾರು 35 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಟೆಸ್ಕೋ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಅಗ್ನಿಶಾಮಕ ದಳದ ಅಧಿಕಾರಿಗಳು ತಮ್ಮ ಪ್ರಾಥಮಿಕ ವರದಿಯಲ್ಲಿ ಬೆಂಕಿ ಹೊತ್ತಿಕೊಂಡಾಗ ಗೋದಾಮಿ ನಲ್ಲಿ ವಿದ್ಯುತ್ ಸಂಪರ್ಕ ವಿಲ್ಲದ ಕಾರಣ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿಲ್ಲ ಎಂದು ಹೇಳಿ ದ್ದಾರೆ.

ಗೋದಾಮಿನ ಮೇಲೆ ಎಸೆದ ಬೀಡಿ ಅಥವಾ ಸಿಗರೇಟ್ ತುಂಡು ಬೆಂಕಿ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಬೇಸಿಗೆಯಲ್ಲಿ ಒಣಗಿದ ಎಲೆಗಳು ಹಾಗೂ ಒಣ ಹವೆಯಿಂದ ಬೆಂಕಿ ಅವಘಡ ಸಂಭವಿಸುವ ಸಂಭವವಿರುವು ದರಿಂದ ಗೋದಾಮು ಮಾಲೀಕರು ಎಚ್ಚರಿಕೆ ವಹಿಸಬೇಕು. ಎಲ್‌ಪಿಜಿ ಗೋಡೌನ್‌ಗೆ ಬೆಂಕಿ ತಗುಲಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.