ಹೃಷಿಕೇಶ (ಉತ್ತರಾಖಂಡ): ದೇಶದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಿರುವ 35 ಪಿಎಸ್‌ಎ ಆಮ್ಲ ಜನಕ ಘಟಕಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಏಮ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.
35 ಪಿಎಸ್‌ಎ ಆಮ್ಲಜನಕ ಘಟಕಗಳಿಗೆ ಚಾಲನೆ ನೀಡಲಾಗಿದೆ. ಈ ಮೂಲಕ ಎಲ್ಲ ಜಿಲ್ಲೆ ಗಳಲ್ಲೂ ಆಮ್ಲಜನಕ ಘಟಕಗಳು ಆರಂಭ ವಾದಂತಾಗಿದೆ ಎಂದು ಪ್ರಧಾನಿ ಹೇಳಿದರು.
ದೇಶದಲ್ಲಿ ಈವರೆಗೆ ಒಟ್ಟು 1,224 ಪಿಎಸ್‌ಎ ವೈದ್ಯಕೀಯ ಆಮ್ಲಜನಕ ಘಟಕಗಳನ್ನು ಪಿಎಂ ಕೇರ್ಸ್ ನಿಧಿ ಅಡಿಯಲ್ಲಿ ಸ್ಥಾಪಿಸ ಲಾಗಿದೆ. 1,100ಕ್ಕೂ ಹೆಚ್ಚು ಘಟಕಗಳು ಪ್ರತಿ ದಿನ 1,750 ಮೆಟ್ರಿಕ್ ಟನ್‌ನಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತವೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಕಾರ್ಯ ಕ್ರಮದಲ್ಲಿ ಹಾಜರಿದ್ದರು.