Sunday, 15th December 2024

ಬಿಜೆಪಿ 375+ ಸೀಟುಗಳನ್ನು ಗೆಲ್ಲುತ್ತದೆ: ನಟ ನಾನಾ ಪಾಟೇಕರ್

ವದೆಹಲಿ: ಲೋಕಸಭೆ ಚುನಾವಣೆ(2024) ಯಲ್ಲಿ ಬಿಜೆಪಿ 375+ ಸೀಟುಗಳನ್ನು ಗೆಲ್ಲುತ್ತದೆ ಎಂದು ಬಾಲಿವುಡ್‌ ನಟ ನಾನಾ ಪಾಟೇಕರ್ ಹೇಳಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಗೆಲುವು ದಾಖಲಿಸುತ್ತದೆ. 375ಕ್ಕೂ ಹೆಚ್ಚು ಸ್ಥಾನಗಳಲ್ಲಿ ವಿಜಯ ಸಾಧಿಸುವ ಮೂಲಕ ಮೂರನೇ ಬಾರಿ ಅಧಿಕಾರದ ಗದ್ದುಗೆ ಏರಲಿದೆ.

ಬಿಜೆಪಿ ಹೇಗೆ ಅಧಿಕಾರಕ್ಕೆ ಮರಳುತ್ತದೆ ಎಂಬುದನ್ನು ನೀವು ನೋಡುತ್ತೀರಿ. ಕೇಂದ್ರದಲ್ಲಿ ಬಿಜೆಪಿ ಬಿಟ್ಟು ಪರ್ಯಾಯ ಆಯ್ಕೆಗಳಿಲ್ಲ. ಮೋದಿ ನೇತೃತ್ವ ದಲ್ಲಿ ದೇಶದಲ್ಲಿ ಉತ್ತಮ ಕೆಲಸ ಕಾರ್ಯಗಳಾಗುತ್ತಿವೆ. ಹೀಗಾಗಿ, ಬಿಜೆಪಿ 375 ರಿಂದ 400 ಸ್ಥಾನಗಳನ್ನು ಗೆದ್ದರೂ ನಾವು ಆಶ್ಚರ್ಯಪಡಬೇಕಿಲ್ಲ ಎಂದಿ ದ್ದಾರೆ.

ಇನ್ನು ಕೆಲ ದಿನಗಳ ಹಿಂದೆಯಷ್ಟೇ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಅವರು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಪಕ್ಷದ ಗೆಲುವಿ ನಿಂದಾಗಿ 2024 ರ ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಿದೆ ಎಂದು ಹೇಳಿದರು. ಅಷ್ಟೇ, ಅಲ್ಲದೆ 2024ರ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು.

ಎಬಿಪಿ ಸಿ ವೋಟರ್‌ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಕೂಡ ಬಿಜೆಪಿಗೆ ಸ್ಪಷ್ಟ ಬಹುಮತದ ಭವಿಷ್ಯ ನುಡಿದಿವೆ.