ಪಾಟ್ನಾ: ಬಿಹಾರದ ಭಾಗಲ್ಪುರದ ಪಟಾಕಿ ತಯಾರಿಕೆ ನಡೆಸಲಾಗುತ್ತಿದ್ದ ಮನೆಯಲ್ಲಿ ಗುರುವಾರ ಮಧ್ಯರಾತ್ರಿ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಮೃತಪಟ್ಟು ಹನ್ನೆರಡು ಜನರು ಗಾಯಗೊಂಡಿದ್ದಾರೆ.
ಬಾಂಬ್ ಸ್ಫೋಟದ ರಭಸಕ್ಕೆ ಮನೆ ಛಿದ್ರವಾಗಿ ಧರೆಗುರುಳಿದೆ. ಮನೆ ಮಾಲೀಕರು ಅಕ್ರಮವಾಗಿ ಪಟಾಕಿ ತಯಾರಿಕೆಯಲ್ಲಿ ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಾಳುಗಳಿಗೆ ಪಟ್ಟಣದ ಜವಾಹರಲಾಲ್ ನೆಹರು ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾಗಲ್ಪುರ್ ರೇಂಜ್ ಉಪ ಪೊಲೀಸ್ ಮಹಾನಿರೀಕ್ಷಕ ಸುಜಿತ್ ಕುಮಾರ್ ಮಾತನಾಡಿ, “ನಾವು ಇದುವರೆಗೆ ನಾಲ್ಕು ಶವಗಳನ್ನು ಮನೆಯ ಅವಶೇಷಗಳ ಅಡಿಯಿಂದ ಹೊರತೆಗೆದಿದ್ದೇವೆ. ಆ ಮನೆಯಲ್ಲಿ ಪಟಾಕಿ ಮತ್ತು ದೇಸಿ ಬಾಂಬ್ ತಯಾರಿಸ ಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ವಿಧಿವಿಜ್ಞಾನ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.