ಗಯಾ (ಬಿಹಾರ): ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾವೋವಾದಿಗಳ ಹತ್ಯೆ ಮಾಡಲಾಗಿದೆ.
ಗಯಾದ ಹಳ್ಳಿಯೊಂದರಲ್ಲಿ ನಕ್ಸಲರು ಮನೆಯ ಅಂಗಳದಲ್ಲಿನ ದನಕ ಕೊಟ್ಟಿಗೆಯಲ್ಲಿ ನಾಲ್ಕು ಜನರನ್ನು ನೇತು ಹಾಕಿ, ಮನೆಯನ್ನು ಸ್ಫೋಟಿಸಿರು ವುದಾಗಿ ಪೊಲೀಸರು ಹೇಳಿದ್ದಾರೆ. ಡುಮರಿಯಾ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಈ ಘಟನೆ ನಡೆದಿದೆ.
ಬಿಹಾರ-ಜಾರ್ಖಂಡ್ ವಲಯದ ಸಮೀಪದಲ್ಲಿರುವ ಸರಯೂ ಸಿಂಗ್ ಭೋಕ್ತಾ ಮನೆಯ ಮೇಲೆ ನಿಷೇಧಿತ ಮಾವೋವಾದಿ ಸದಸ್ಯರು ದಾಳಿ ನಡೆಸಿದ್ದರು. ಮಾವೋವಾದಿಗಳು ಭೋಕ್ತಾ ಅವರ ಮನೆಯಲ್ಲಿ ಕರಪತ್ರ ಬಿಟ್ಟು ಹೋಗಿದ್ದು, ಭೋಕ್ತಾ ಮತ್ತು ಅವರ ಕುಟುಂಬವನ್ನು ಪೊಲೀಸ್ ಮಾಹಿತಿದಾರರು ಎಂದು ಆರೋಪಿಸಿದ್ದಾರೆ.
ಸ್ಥಳೀಯ ಪೊಲೀಸರು ಮತ್ತು ಕೋಬ್ರಾ ಬೆಟಾಲಿಯನ್ ಮಾರ್ಚ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟ ಕಗಳನ್ನು ವಶಪಡಿಸಿಕೊಂಡಿದ್ದರು.