Thursday, 12th December 2024

ಮಾವೋವಾದಿಗಳಿಂದ ಕುಟುಂಬದ ನಾಲ್ವರ ಹತ್ಯೆ, ಸ್ಪೋಟಕ್ಕೆ ಮನೆ ಛಿದ್ರ

ಗಯಾ (ಬಿಹಾರ): ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾವೋವಾದಿಗಳ ಹತ್ಯೆ ಮಾಡಲಾಗಿದೆ.

ಗಯಾದ ಹಳ್ಳಿಯೊಂದರಲ್ಲಿ ನಕ್ಸಲರು ಮನೆಯ ಅಂಗಳದಲ್ಲಿನ ದನಕ ಕೊಟ್ಟಿಗೆಯಲ್ಲಿ ನಾಲ್ಕು ಜನರನ್ನು ನೇತು ಹಾಕಿ, ಮನೆಯನ್ನು ಸ್ಫೋಟಿಸಿರು ವುದಾಗಿ ಪೊಲೀಸರು ಹೇಳಿದ್ದಾರೆ. ಡುಮರಿಯಾ ಪೊಲೀಸ್‌ ಠಾಣಾ ವ್ಯಾಪ್ತಿ ಯಲ್ಲಿ ಈ ಘಟನೆ ನಡೆದಿದೆ.

ಬಿಹಾರ-ಜಾರ್ಖಂಡ್‌ ವಲಯದ ಸಮೀಪದಲ್ಲಿರುವ ಸರಯೂ ಸಿಂಗ್‌ ಭೋಕ್ತಾ ಮನೆಯ ಮೇಲೆ ನಿಷೇಧಿತ ಮಾವೋವಾದಿ ಸದಸ್ಯರು ದಾಳಿ ನಡೆಸಿದ್ದರು. ಮಾವೋವಾದಿಗಳು ಭೋಕ್ತಾ ಅವರ ಮನೆಯಲ್ಲಿ  ಕರಪತ್ರ ಬಿಟ್ಟು ಹೋಗಿದ್ದು, ಭೋಕ್ತಾ ಮತ್ತು ಅವರ ಕುಟುಂಬವನ್ನು ಪೊಲೀಸ್‌ ಮಾಹಿತಿದಾರರು ಎಂದು ಆರೋಪಿಸಿದ್ದಾರೆ.

ಸ್ಥಳೀಯ ಪೊಲೀಸರು ಮತ್ತು ಕೋಬ್ರಾ ಬೆಟಾಲಿಯನ್‌ ಮಾರ್ಚ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟ ಕಗಳನ್ನು ವಶಪಡಿಸಿಕೊಂಡಿದ್ದರು.

ಭೋಕ್ತಾ ಅವರ ಇಬ್ಬರು ಗಂಡು ಮಕ್ಕಳು ಹಾಗೂ ಅವರ ಹೆಂಡತಿಯರನ್ನು ಹತ್ಯೆ ಮಾಡಿ, ದನದ ಕೊಟ್ಟಿಗೆಯಲ್ಲಿ ಬಿದಿರು ಬೊಂಬುಗಳಿಗೆ ತೂಗಿ ಹಾಕಿ ದ್ದರು. ಹಾಗೇ ಮನೆಯೊಳಗೆ ಬಾಂಬ್‌ಗಳನ್ನು ಇಟ್ಟು ಸಿಡಿಸಲಾಗಿದೆ.

ಗಯಾದ ಎಸ್‌ಎಸ್‌ಪಿ ಆದಿತ್ಯ ಕುಮಾರ್‌ ಘಟನೆಯ ಸ್ಥಳದಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ.