ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನ ಹತ್ಯೆ ಮಾಡಲಾಗಿದೆ.
ಹಾಗೆಯೇ ಪುಲ್ವಾಮಾ ಮತ್ತು ಗಂದರ್ವಾಲ್ ಜಿಲ್ಲೆಗಳಲ್ಲಿಯೂ ಎನ್‌ಕೌಂಟರ್ ನಡೆದಿದ್ದು, ಭಯೋತ್ಪಾದಕ ಸಂಘಟನೆಗಳ ಮೂವರು ಸದಸ್ಯರನ್ನು ಕೊಲ್ಲ ಲಾಯಿತು.
ಪುಲ್ವಾಮಾದಲ್ಲಿ, ಜೈಶ್-ಎ-ಮುಹಮ್ಮದ್‌ನ ಇಬ್ಬರು ಉಗ್ರರು ಮತ್ತು ಹ್ಮದ್ವಾರಾ ಮತ್ತು ಗಂದರ್‌ಬಾಲ್‌ನಲ್ಲಿ ಎಲ್‌ಇಟಿಯ ತಲಾ ಒಬ್ಬರು ಹತರಾಗಿ ದ್ದಾರೆ. ಒಂದು ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರನನ್ನು ಸೆರೆಹಿಡಿಯಲಾಗಿದೆ. ಪುಲ್ವಾಮಾದಲ್ಲಿ, ಚೆವಲ್ಕಲನ್ ಗ್ರಾಮದಲ್ಲಿ ಎನ್‌ಕೌಂಟರ್ ನಡೆದಿದ್ದು, ಇದುವರೆಗೆ ಇಬ್ಬರು ಜೈಶ್ ಉಗ್ರರು ಹತರಾಗಿದ್ದಾರೆ. ಕುಪ್ವಾರದ ಹಂದ್ವಾರ ಪ್ರದೇಶದ ರಾಜ್‌ವಾರ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇನ್ನೊಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. ಗಂದೇರ್ಬಾಲ್ ಎನ್‌ಕೌಂಟರ್‌ನಲ್ಲಿ ನಾಲ್ಕನೇ ಉಗ್ರಗಾಮಿ ಹತನಾಗಿದ್ದಾನೆ.
‘ಹಂದ್ವಾರದ ನೆಚಮ ರಾಜವಾರ್ ಪ್ರದೇಶದಲ್ಲಿ ಎನ್‌ಕೌಂಟರ್ ಆರಂಭ ವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯ ಪ್ರವೃತ್ತವಾಗಿವೆ’. ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ತಂಡವು ಪ್ರದೇಶಗಳನ್ನು ಸುತ್ತುವರೆದ ನಂತರ ಮತ್ತು ಭಯೋ ತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು.
ಜೆಇಎಂನ ಇಬ್ಬರು ಉಗ್ರರು ಪುಲ್ವಾಮಾದಲ್ಲಿ, ಒಬ್ಬ ಎಲ್‌ಇಟಿ ಉಗ್ರಗಾಮಿ ಗಂದರ್ಬಾಲ್ನಲ್ಲಿ ಮತ್ತು ಒಬ್ಬ ಎಲ್‌ಇಟಿ ಉಗ್ರಗಾಮಿ ಹಂದ್ವಾರದಲ್ಲಿ ಕೊಲ್ಲಲ್ಪಟ್ಟರು. ಸರಪಂಚ್ ಕೊಲ್ಲಲ್ಪಟ್ಟ ಕೆಲವೇ ಗಂಟೆಗಳ ನಂತರ ಎನ್‌ಕೌಂಟರ್‌ಗಳು ನಡೆದಿವೆ.