Monday, 16th September 2024

ಮೊದಲ ಹಂತದ ಮತದಾನ : ಬಂಗಾಳದಲ್ಲಿ ಶೇ. 40. 73, ಅಸ್ಸಾಂನಲ್ಲಿ ಶೇ. 37

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯುತ್ತಿರುವ ಮೊದಲ ಹಂತದಲ್ಲಿ ಮತದಾನದಲ್ಲಿ ಮಧ್ಯಾಹ್ನದವರೆಗೂ ಶೇ. 40. 73 ರಷ್ಟು ಮತ ಚಲಾವಣೆಯಾಗಿರುವುದಾಗಿ ವರದಿಯಾಗಿದೆ. 30 ಸ್ಥಾನಗಳಿಗೆ ನಡೆಯುತ್ತಿರುವ ಮೊದಲ ಹಂತದ ಚುನಾವಣೆಯಲ್ಲಿ 23 ಮಹಿಳೆಯರು ಸೇರಿದಂತೆ 191 ಅಭ್ಯರ್ಥಿಗಳ ಅದೃಷ್ಟ ನಿರ್ಧಾರವಾಗಲಿದೆ.

ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಸಹೋದರನ ಕಾರು ಮೇಲೆ ದುಷ್ಕರ್ಮಿಗಳು ಸಾಬಾಜ್ ಪುತ್ ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ. ಅಲ್ಲದೇ, ಕಾರು ಚಾಲಕನ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಟಿಎಂಸಿ ಬ್ಲಾಕ್ ಅಧ್ಯಕ್ಷ ರಾಮ್ ಗೋವಿಂದ್ ದಾಸ್ ಪ್ರಚೋದನೆಯಿಂದ ಹಲ್ಲೆ ದಾಳಿ ನಡೆದಿದೆ ಎಂದು ಸುವೇಂದು ಮತ್ತು ಆತನ ಸಹೋದರ ದಿಬಿಯಾಂದು ಅಧಿಕಾರಿ ಆರೋಪಿಸಿದ್ದಾರೆ.

ಅಸ್ಸಾಂನ 47 ವಿಧಾನಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನದವರೆಗೂ ಶೇ. 37 ರಷ್ಟು ಮತದಾನವಾಗಿದೆ. ಕೈಲಾಬೊರ್ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ಗೋಹ್ಪುರದಲ್ಲಿ ಕಡಿಮೆ ಸಂಖ್ಯೆಯ ಮತದಾನವಾಗಿದೆ.

ಮುಂದಿನ ಹಂತದ ಮತದಾನ ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *