ನವದೆಹಲಿ: ಪೆಟ್ರೋಲ್-ಡಿಸೇಲ್ ಬೆಲೆ ಮಧ್ಯೆ ಈ ತಿಂಗಳು ಮತ್ತೆ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.
ಅನಿಲ ಕಂಪನಿಗಳು, ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದ್ದು, ವಾಣಿಜ್ಯ ಸಿಲಿಂಡರ್‌ಗಳ ಬೆಲೆ 43.5 ರೂಪಾಯಿಗಳಷ್ಟು ಹೆಚ್ಚಾಗಿದೆ. ಈ ಹೆಚ್ಚಳದಿಂದ ರೆಸ್ಟೋರೆಂಟ್, ಹೊಟೇಲ್ ಆಹಾರಗಳು ದುಬಾರಿಯಾಗುವ ಸಾಧ್ಯತೆಯಿದೆ.
ನವದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1736.5 ರೂಪಾಯಿಯಾಗಿದೆ. ಸೆಪ್ಟೆಂಬರ್’ನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1693 ರೂಪಾಯಿಯಿತ್ತು. ದೇಶೀಯ ಬಳಕೆಗಾಗಿ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1805.5 ರೂಪಾಯಿಯಾಗಿದೆ. ಪೆಟ್ರೋಲಿಯಂ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪರಿಶೀಲಿಸುತ್ತವೆ. ಈ ಹಿಂದೆ ಸೆ.1 ರಂದು ಎಲ್ಪಿಜಿ ಸಿಲಿಂಡರ್ ಬೆಲೆ 25 ರೂಪಾಯಿ ಹೆಚ್ಚಾಗಿತ್ತು. ಈ ತಿಂಗಳು ಯಾವುದೇ ಬದಲಾವಣೆಯಾಗಿಲ್ಲ.