Friday, 22nd November 2024

ಜೂನ್‌ನಲ್ಲಿ ಯುಪಿಐ ವಹಿವಾಟು 5.47 ಲಕ್ಷ ಕೋ. ರೂಪಾಯಿ

ಮುಂಬೈ/ನವದೆಹಲಿ: ಜೂನ್ ತಿಂಗಳಿನಲ್ಲಿ ಯುಪಿಐ ವಹಿವಾಟು 5.47 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿದ ಮಾಹಿತಿಯಿಂದ ಬಹಿರಂಗಗೊಂಡಿದೆ.

ಮೇ 2021 ರಲ್ಲಿ ಯುಪಿಐ ವಹಿವಾಟು 4.91 ಲಕ್ಷ ಕೋಟಿ ರೂ. ನಷ್ಟಿದ್ದು, ಜೂನ್‌ನಲ್ಲಿ ಶೇ.11.6ರಷ್ಟು ಏರಿಕೆಯಾಗಿ 5.47 ಲಕ್ಷ ಕೋಟಿಗೆ ಮುಟ್ಟಿದೆ. ಜೂನ್ ತಿಂಗಳಲ್ಲಿ 2.80 ಬಿಲಿಯನ್ (280 ಕೋಟಿ) ವಹಿವಾಟುಗಳು ನಡೆದಿವೆ. ಮೇ ತಿಂಗಳಲ್ಲಿ 2.53 ಬಿಲಿಯನ್ (253 ಕೋಟಿ) ರಷ್ಟಿದೆ ಎಂದು ಎನ್‌ಪಿಸಿಐ ಅಂಕಿ ಅಂಶಗಳು ತಿಳಿಸಿವೆ.

ಎನ್‌ಪಿಸಿಐ ಭಾರತದಲ್ಲಿ ಚಿಲ್ಲರೆ ಪಾವತಿ ಮತ್ತು ವಸಾಹತು ವ್ಯವಸ್ಥೆಗಳನ್ನು ನಿರ್ವಹಿಸುವ ಒಂದು ಸಂಸ್ಥೆಯಾಗಿದೆ. ಯುಪಿಐ ವ್ಯವಸ್ಥೆಯಲ್ಲಿ ಒಟ್ಟಾರೆ ಫೋನ್‌ಪೇ, ಗೂಗಲ್ ಪೇ ಮತ್ತು ಪೇಟಿಎಂ ಶೇ.90ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ನಿಯಂತ್ರಿಸುತ್ತವೆ.