Saturday, 14th December 2024

ಪಟಾಕಿ ವ್ಯಾಪಾರಿ ಮನೆಯಲ್ಲಿ ಸ್ಫೋಟ: ಐವರ ಸಾವು

ನವದೆಹಲಿ: ಬಿಹಾರದ ಸರನ್ ಜಿಲ್ಲೆಯ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯ ಖುದೈ ಬಾಗ್ ಗ್ರಾಮದ ಪಟಾಕಿ ವ್ಯಾಪಾರಿಯೊಬ್ಬರ ಮನೆಯಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಐವರು ಮೃತಪಟ್ಟಿದ್ದಾರೆ.

ಉದ್ಯಮಿ ಶಬೀರ್ ಹುಸೇನ್ ಎಂದು ಗುರುತಿಸಲಾಗಿದೆ. ಸ್ಫೋಟವು ಮನೆಯ ಒಂದು ಭಾಗ ಸ್ಫೋಟಿಸಲು ಕಾರಣವಾಯಿತು ಮತ್ತು ಉಳಿದ ಭಾಗ ಬೆಂಕಿಗೆ ಆಹುತಿಯಾಯಿತು. ಮನೆಯು ನದಿಯ ದಡದಲ್ಲಿದೆ, ಅದರಲ್ಲಿ ಮನೆಯ ಹೆಚ್ಚಿನ ಭಾಗವು ಕುಸಿದಿದೆ. ಸ್ಫೋಟದಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ.

‘ಛಾಪ್ರಾದಲ್ಲಿ ಸ್ಫೋಟದಿಂದಾಗಿ ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಸ್ಫೋಟದ ಹಿಂದಿನ ಕಾರಣ ತನಿಖೆ ಮಾಡುತ್ತಿದ್ದೇವೆ.

ಸ್ಫೋಟ ಸಂಭವಿಸಿದ ಮನೆಯೊಳಗೆ ಪಟಾಕಿಗಳನ್ನು ತಯಾರಿಸಲಾಗಿದ್ದು, ಒಂದು ಗಂಟೆಗಳ ಕಾಲ ನಿರಂತರವಾಗಿ ಸ್ಫೋಟಗಳು ಕೇಳಿ ಬರುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.