ದೀಪಾವಳಿ ಪ್ರಯುಕ್ತ ಎರಡು ದಿನ, ಎಐಸಿಸಿ ಅಧ್ಯಕ್ಷ ಪದಗ್ರಹಣಕ್ಕಾಗಿ ಒಂದು ದಿನ ಸೇರಿ ಒಟ್ಟು ಮೂರು ದಿನ ಯಾತ್ರೆಗೆ ಬಿಡುವು ನೀಡಲಾಗಿತ್ತು. ಯಥಾರೀತಿ ಉತ್ಸಾಹದಂತೆ ಯಾತ್ರೆ ಪುನರಾರಂಭವಾಗಿದೆ. ರಾಹುಲ್‍ಗಾಂಧಿ ಅವರಿಗೆ ಮತ್ತೊಮ್ಮೆ ಮೆಹಬೂಬ್ ನಗರ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕರ್ತರು, ಮುಖಂಡರು ಉತ್ಸಾಹದಿಂದ ಭಾಗವಹಿಸಿದರು.
ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ ದಾಟಿ ತೆಲಂಗಾಣ ದಿಂದ ಮುಂದುವರೆಯುತ್ತಿದೆ. 150 ದಿನಗಳ 3700ಕ್ಕೂ ಹೆಚ್ಚು ಕಿ.ಮೀ. ದೂರದ ಈ ಯಾತ್ರೆ ಈವರೆಗೂ ಮೂರನೇ ಒಂದು ಭಾಗ ದಷ್ಟು ಪೂರ್ಣಗೊಂಡಿದೆ.