Sunday, 15th December 2024

50 ದಿನಗಳನ್ನು ಪೂರೈಸಿದ ಭಾರತ ಐಕ್ಯತಾ ಯಾತ್ರೆ

ಮರಾವತಿ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಕೈಗೊಂಡಿ ರುವ ಭಾರತ ಐಕ್ಯತಾ ಯಾತ್ರೆ ಇಂದಿಗೆ 50 ದಿನಗಳನ್ನು ಪೂರೈಸಿದೆ.

ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯಲ್ಲಿ ಭಾರತ ಐಕ್ಯತಾ ಯಾತ್ರೆ ಸಂಚರಿಸುತ್ತಿದೆ. ಗುರುವಾರ ಮತ್ಕಲ್‍ನಿಂದ ಆರಂಭ ವಾದ ಯಾತ್ರೆ ಪ್ರಾರಂಭ ದಲ್ಲಿ 14 ಕಿ.ಮೀ. ಸಂಚರಿಸಿದೆ.

ದೀಪಾವಳಿ ಪ್ರಯುಕ್ತ ಎರಡು ದಿನ, ಎಐಸಿಸಿ ಅಧ್ಯಕ್ಷ ಪದಗ್ರಹಣಕ್ಕಾಗಿ ಒಂದು ದಿನ ಸೇರಿ ಒಟ್ಟು ಮೂರು ದಿನ ಯಾತ್ರೆಗೆ ಬಿಡುವು ನೀಡಲಾಗಿತ್ತು. ಯಥಾರೀತಿ ಉತ್ಸಾಹದಂತೆ ಯಾತ್ರೆ ಪುನರಾರಂಭವಾಗಿದೆ. ರಾಹುಲ್‍ಗಾಂಧಿ ಅವರಿಗೆ ಮತ್ತೊಮ್ಮೆ ಮೆಹಬೂಬ್ ನಗರ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕರ್ತರು, ಮುಖಂಡರು ಉತ್ಸಾಹದಿಂದ ಭಾಗವಹಿಸಿದರು.

ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ ದಾಟಿ ತೆಲಂಗಾಣ ದಿಂದ ಮುಂದುವರೆಯುತ್ತಿದೆ. 150 ದಿನಗಳ 3700ಕ್ಕೂ ಹೆಚ್ಚು ಕಿ.ಮೀ. ದೂರದ ಈ ಯಾತ್ರೆ ಈವರೆಗೂ ಮೂರನೇ ಒಂದು ಭಾಗ ದಷ್ಟು ಪೂರ್ಣಗೊಂಡಿದೆ.