Sunday, 15th December 2024

ಬಲವಾಗಿ ಬೆಳೆಯುತ್ತಿದೆ: ಮಾರುತಿ ಸುಜುಕಿ 500ನೇ ನೆಕ್ಸಾ ಮಾರಾಟ ಮಳಿಗೆ ಉದ್ಘಾಟಿಸಿದೆ

• 500ನೇ ನೆಕ್ಸಾ ಮಾರಾಟ ಮಳಿಗೆಯನ್ನು ಕರ್ನಾಟಕದ ಬೆಂಗಳೂರಿನಲ್ಲಿ ಉದ್ಘಾಟಿಸಲಾಗಿದೆ
• ನೆಕ್ಸಾ ಮಾರಾಟ ಜಾಲವು 300 ನಗರಗಳನ್ನು ವ್ಯಾಪಿಸಿದೆ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಇಂದು ತನ್ನ 500ನೇ ನೆಕ್ಸಾ ಮಾರಾಟ ಮಳಿಗೆಯನ್ನು ಕರ್ನಾಟಕದ ಬೆಂಗಳೂರಿನಲ್ಲಿ ಉದ್ಘಾಟಿಸಿದೆ. ಇದರೊಂದಿಗೆ ಮಾರುತಿ ಸುಜುಕಿಯ ಮಾರಾಟ ಜಾಲ (ಅರೆನಾ, ನೆಕ್ಸಾ ಮತ್ತು ಕಮರ್ಷಿಯಲ್) ಈಗ 2,577 ಪಟ್ಟಣಗಳು ಮತ್ತು ನಗರಗಳನ್ನು ಒಳಗೊಂಡ 3,925 ಔಟ್‌ಲೆಟ್‌ಗಳಿಗೆ ವಿಸ್ತರಿಸಿದೆ.

ಮಾರುತಿ ಸುಜುಕಿ ಬ್ರಾಂಡ್‌ನಲ್ಲಿನ ನಿರಂತರ ನಂಬಿಕೆಗಾಗಿ ಗ್ರಾಹಕರಿಗೆ ಧನ್ಯವಾದ ಅರ್ಪಿಸುತ್ತಾ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ಹಿಸಾಶಿ ಟಕೆಯುಚಿ ಹೇಳಿದರು, “ಮಾರುತಿ ಸುಜುಕಿಯಲ್ಲಿನ ನಿರಂತರ ನಂಬಿಕೆಗಾಗಿ ನಮ್ಮ ಗ್ರಾಹಕರು ಮತ್ತು ನಮ್ಮ ಡೀಲರ್ ಪಾಲುದಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಅವರ ಅಚಲವಾದ ಬೆಂಬಲ ಮತ್ತು ಉತ್ಸಾಹವು ನಿರಂತರವಾಗಿ ನಮ್ಮ ಮಿತಿಗಳನ್ನು ಮೀರಲು ಮತ್ತು ನಾವು ಮಾಡುವ ಎಲ್ಲದರಲ್ಲೂ ಶ್ರೇಷ್ಠತೆಗಾಗಿ ಶ್ರಮಿಸುವಂತೆ ಪ್ರೇರೇಪಿಸುತ್ತದೆ.

“ನಮ್ಮ ಯಶಸ್ಸಿಗೆ ನಾವು ಗ್ರಾಹಕರಿಗೆ ಋಣಿಯಾಗಿದ್ದೇವೆ ಮತ್ತು ಅವರಿಗೆ ಸಂತೋಷಕರವಾದ ಕಾರು ಮಾಲೀಕತ್ವದ ಅನುಭವವನ್ನು ಒದಗಿಸುವುದು ಯಾವಾಗಲೂ ನಮ್ಮ ಪ್ರಯತ್ನವಾಗಿದೆ. ಗ್ರಾಹಕರ ತೃಪ್ತಿಗೆ ಒಂದು ದೊಡ್ಡ ಕಾರಣವೆಂದರೆ ನೆಟ್‌ವರ್ಕ್‌ನ ಸಾಮೀಪ್ಯ ಮತ್ತು ನಮ್ಮ ಮಾರಾಟ ಮಳಿಗೆಗಳಲ್ಲಿ ಖರೀದಿ ಅನುಭವ. ಭಾರತವು ಬೆಳೆಯುತ್ತಿರುವಂತೆ, ಗ್ರಾಹಕರ ಆದ್ಯತೆಗಳು ವಿಕಸನಗೊಳ್ಳುತ್ತಿವೆ. ಆದ್ದರಿಂದ, ನಮ್ಮ ಉತ್ಪನ್ನಗಳ ಮೂಲಕ ಮತ್ತು ಅವರಿಗೆ ಉತ್ತಮ ಖರೀದಿ ಅನುಭವವನ್ನು ನೀಡುವ ಮೂಲಕ ಈ ವಿಕಸನಗೊಳ್ಳುತ್ತಿರುವ ಆದ್ಯತೆಗಳನ್ನು ಮೀರಿಸುವುದು ನಮ್ಮ ನಿರಂತರ ಗಮನವಾಗಿದೆ. ಬೆಳೆಯುತ್ತಿರುವ ನೆಕ್ಸಾ ರೀಟೇಲ್ ನೆಟ್ವರ್ಕ್ ಮತ್ತು ಮಾರಾಟಗಳು, ಸಾಧ್ಯವಾದಷ್ಟು ಜನರಿಗೆ ‘ಜಾಯ್ ಆಫ್ ಮೊಬಿಲಿಟಿ’ ಒದಗಿಸುವಲ್ಲಿನ ನಮ್ಮ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ.

ಸರಿಸಾಟಿಯಿಲ್ಲದ ಕಾರು ಖರೀದಿಯ ಅನುಭವ ನೀಡುವ ಮೂಲಕ ಹೊಸ ವರ್ಗಗಳ ಗ್ರಾಹಕರನ್ನು ಆಕರ್ಷಿಸಲು, ಮಾರುತಿ ಸುಜುಕಿ ತನ್ನ ನೆಕ್ಸಾ ರೀಟೇಲ್ ಚಾನೆಲ್ ಅನ್ನು ಜುಲೈ 2015 ರಲ್ಲಿ ಪ್ರಾರಂಭಿಸಿತು. ನೆಕ್ಸಾ ಅನ್ನು ಉದ್ಘಾಟಿಸಿದ ಒಂದು ವರ್ಷದೊಳಗೆ, ಕಂಪನಿಯು 94 ನಗರಗಳಲ್ಲಿ 100 ನೆಕ್ಸಾ ಮಾರಾಟ ಮಳಿಗೆಗಳನ್ನು ಯಶಸ್ವಿಯಾಗಿ ಸ್ಥಾಪಿಸಿತು. ಎಫ್ವೈ 23-24 ರಲ್ಲಿ,5.61 ಲಕ್ಷಕ್ಕೂ ಹೆಚ್ಚು ವಾಹನಗಳ ಮಾರಾಟದೊಂದಿಗೆ ನೆಕ್ಸಾ ಹಿಂದಿನ ಹಣಕಾಸು ವರ್ಷಕ್ಕಿಂತ 54% ರಷ್ಟು ಬೆಳವಣಿಗೆಯನ್ನು ದಾಖಲಿಸುವ ಮೂಲಕ ಉದ್ಯಮದ ಬೆಳವಣಿಗೆಯನ್ನು ಮೀರಿ ಮುಂದೆ ಸಾಗಿದೆ*. ಮಾರುತಿ ಸುಜುಕಿಯ ದೇಶೀಯ ಮಾರಾಟದಲ್ಲಿ ನೆಕ್ಸಾ ಸುಮಾರು 30% ಪಾಲು ಹೊಂದಿದೆ. ಮಾರುತಿ ಸುಜುಕಿಯ ಜನಪ್ರಿಯ ಮಾದರಿಗಳಾದ ಇಗ್ನಿಸ್, ಬಲೆನೊ, ಫ್ರಾಂಕ್ಸ್, ಸಿಯಾಸ್, ಜಿಮ್ನಿ, ಎಕ್ಸ್ಎಲ್6, ಗ್ರಾಂಡ್ ವಿಟಾರ ಮತ್ತು ಇನ್ವಿಕ್ಟೊ ಗಳನ್ನು ನೆಕ್ಸಾ ಚಾನೆಲ್ ಮೂಲಕ ರೀಟೇಲ್ ಮಾರಾಟ ಮಾಡಲಾಗುತ್ತಿದೆ.