Thursday, 12th December 2024

ಜವಾದ್ ಭೀತಿ: ಉತ್ತರ ಆಂಧ್ರಪ್ರದೇಶದಲ್ಲಿ 54,008 ಜನರ ಸ್ಥಳಾಂತರ

ನವದೆಹಲಿ: ಜವಾದ್ ಚಂಡಮಾರುತ ಉತ್ತರ ಆಂಧ್ರಪ್ರದೇಶಕ್ಕೆ ಶನಿವಾರ ಅಪ್ಪಳಿ ಸುವ ಸಾಧ್ಯತೆಯಿರುವುದರಿಂದ, ಅಲ್ಲಿನ ಸರ್ಕಾರವು ಮೂರು ಜಿಲ್ಲೆಗಳಿಂದ 54,008 ಜನರನ್ನು ಸ್ಥಳಾಂತರಿಸಿದೆ.

ಶ್ರೀಕಾಕುಳಂ ಜಿಲ್ಲೆಯಿಂದ 15,755 ಜನರನ್ನು, ವಿಜಯನಗರದಿಂದ 1,700 ಮತ್ತು ವಿಶಾಖಪಟ್ಟಣದಿಂದ 36,553 ಜನರನ್ನು  ರಕ್ಷಣಾ ತಂಡವು ಸ್ಥಳಾಂತರಿಸಿದೆ.

ಶಾಲೆಗಳು ಮತ್ತು ಸಮುದಾಯ ಭವನಗಳಲ್ಲಿ ಸರ್ಕಾರ 197 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ 11 ತಂಡಗಳನ್ನು ನಿಯೋಜಿಸ ಲಾಗಿದ್ದು, ರಾಜ್ಯ ವಿಪತ್ತು ಪರಿಹಾರ ದಳದ ಐದು ತಂಡಗಳು ಮತ್ತು ಕೋಸ್ಟ್ ಗಾರ್ಡ್‌ನ ಆರು ತಂಡಗಳು ಸ್ಥಳದಲ್ಲಿವೆ.

ಎರಡು ಹೆಲಿಕಾಪ್ಟರ್‌ಗಳು ಸನ್ನದ್ಧ ಸ್ಥಿತಿಯಲ್ಲಿವೆ. ಯಾವುದೇ ಅನಿರೀಕ್ಷಿತ ಪರಿಸ್ಥಿತಿ ಎದುರಿಸಲು ₹ 1 ಕೋಟಿ ಬಿಡುಗಡೆ ಮಾಡಲಾ ಗಿದೆ.