ನವದೆಹಲಿ: ಕೋವಿಡ್-19 ಸೋಂಕು ಉಲ್ಬಣವಾಗುತ್ತಿರುವ ಹೊತ್ತಿನಲ್ಲೇ ಓಮೈಕ್ರಾನ್ ಸೋಂಕಿತರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಈ ವರೆಗೂ 5,488 ಪ್ರಕರಣಗಳು ವರದಿಯಾಗಿದೆ.
ದೇಶಾದ್ಯಂತ ಇರುವ ಒಟ್ಟಾರೆ ಓಮಿಕ್ರಾನ್ ಸೋಂಕಿತರ ಸಂಖ್ಯೆ 5,488ಕ್ಕೆ ಏರಿಕೆಯಾಗಿದೆ. ಈ ವರೆಗೂ 2,162 ಮಂದಿ ಗುಣಮುಖರಾಗಿದ್ದಾರೆಂದು ತಿಳಿಸಿದೆ.
ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ದೇಶದ ಒಟ್ಟು 28 ರಾಜ್ಯಗಳಲ್ಲಿ ಓಮೈಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದೆ. ಈ ಪೈಕಿ ಮಹಾರಾಷ್ಟ್ರ ದಲ್ಲಿ ಅತೀ ಹೆಚ್ಚು ಅಂದರೆ 1,367 ಮಂದಿ ಓಮೈಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 734 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.
ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿರುವ ಇತರ ರಾಜ್ಯಗಳೆಂದರೆ ರಾಜಸ್ಥಾನ 792, ದೆಹಲಿ 549, ಕೇರಳ 486, ಕರ್ನಾಟಕ 479, ಪಶ್ಚಿಮ ಬಂಗಾಳ 294, ಉತ್ತರಪ್ರದೇಶ 275, ತೆಲಂಗಾಣ 260, ಗುಜರಾತ್ 236, ತಮಿಳುನಾಡು 185, ಒಡಿಶಾ 169, ಹರಿಯಾಣ 162, ಆಂಧ್ರಪ್ರದೇಶ 61, ಮೇಘಾಲಯ 31, ಬಿಹಾರ 27, ಪಂಜಾಬ್ 27, ಜಮ್ಮು ಮತ್ತು ಕಾಶ್ಮೀರ 23, ಗೋವಾ 21, ಮಧ್ಯಪ್ರದೇಶ 10, ಅಸ್ಸಾಂ 9, ಉತ್ತರಾಖಂಡ 8, ಚತ್ತೀಸ್ಗಢ 5, ಅಂಡಮಾನ್ ಮತ್ತು ನಿಕೋಬಾರ್ 3, ಚಂಡೀಗಢ3 ಹಾಗೂ ಲಡಾಖ್, ಪಾಂಡಿಚೆರಿಯಲ್ಲಿ ತಲಾ 2 ಪ್ರಕರಣಗಳು ವರದಿಯಾಗಿವೆ.