Friday, 22nd November 2024

ರಾಜಸ್ಥಾನದಲ್ಲಿ 5G ಸೇವೆಗಳಿಗೆ ಆಕಾಶ್ ಅಂಬಾನಿ ಚಾಲನೆ

ರಾಜಸ್ಥಾನ: ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಅಧ್ಯಕ್ಷ ಆಕಾಶ್ ಅಂಬಾನಿ ಶನಿವಾರ ರಾಜ್‌ಸಮಂದ್‌ನಿಂದ 5G ಸೇವೆಗಳಿಗೆ ಚಾಲನೆ ನೀಡಿದರು.

ಜಿಯೋ ಟ್ರೂ 5G ಸೇವೆಯೊಂದಿಗೆ, 5G ಪವರ್ ವೈಫೈ ಸೇವೆಗಳು ನಾಥದ್ವಾರ ದಲ್ಲಿ ಪ್ರಾರಂಭವಾಗಿವೆ. 5G ಸೇವೆಗಳು ಭಾರತದ ಮೂಲೆ ಮೂಲೆಯಲ್ಲಿ ಪ್ರಾರಂಭವಾಗುವುದು ನಮ್ಮ ಪ್ರಯತ್ನವಾಗಿದೆ. ಜಿಯೋ 5G ಸೇವೆಯು ಶೀಘ್ರವಾಗಿ ಪ್ರಾರಂಭವಾಗುತ್ತದೆ ಎಂದು ಆಕಾಶ್ ಅಂಬಾನಿ ಬಿಡುಗಡೆ ಸಮಾರಂಭದಲ್ಲಿ ಹೇಳಿದರು.

2015 ರಲ್ಲಿ, ಮುಖೇಶ್ ಅಂಬಾನಿ 4G ಸೇವೆಗಳನ್ನು ಪ್ರಾರಂಭಿಸುವ ಮೊದಲು ನಾಥದ್ವಾರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮುಕೇಶ್ ಅಂಬಾನಿ ನಾಥಜಿಯ ದರ್ಶನದ ನಂತರ ದೇವಾಲಯದ ಮಹಂತ್ ವಿಶಾಲ್ ಬಾಬಾ ಅವರಿಂದ ಆಶೀರ್ವಾದ ಪಡೆದಿದ್ದರು.

ಆಕಾಶ್ ಅಂಬಾನಿ ಈ ವರ್ಷದ ಜೂನ್‌ನಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾಗಿ ನೇಮಕಗೊಂಡಿ ದ್ದಾರೆ.

ಅಕ್ಟೋಬರ್ 2 ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದರು.