Sunday, 15th December 2024

ಓಮಿಕ್ರಾನ್ ಕಾಟ: ಆರು ಮಂದಿ ವಿದೇಶಿಗರಲ್ಲಿ ಕೋವಿಡ್ ಪಾಸಿಟಿವ್ ದೃಢ

Omicrone

ನವದೆಹಲಿ: ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳಿಂದ ಸುಮಾರು 3,000 ಅಂತ ರಾಷ್ಟ್ರೀಯ ಪ್ರಯಾಣಿಕರು ಗುರುವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಕನಿಷ್ಠ ಆರು ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಹೊಸ ಕರೋನಾ ವೈರಸ್ ರೂಪಾಂತರಿ ಓಮಿಕ್ರಾನ್ ಹೊರಹೊಮ್ಮುವಿಕೆಯ ಹಿನ್ನೆಲೆಯಲ್ಲಿ ‘ಅಪಾಯದಲ್ಲಿ ರುವ’ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಸೇರಿದಂತೆ ಹಲವು ಕಟ್ಟುನಿಟ್ಟಾದ ನಿಯಮಗಳು ಜಾರಿಯಲ್ಲಿವೆ.

‘ಹೊಸ ನಿಯಮಗಳ ಪ್ರಕಾರ. ಅಪಾಯದಲ್ಲಿರುವ’ ದೇಶಗಳಿಂದ ಬರುವ ಪ್ರಯಾಣಿಕರು ಅವರ ಕೋವಿಡ್ ಪರೀಕ್ಷಾ ಫಲಿತಾಂಶ ಘೋಷಿಸುವವರೆಗೆ ವಿಮಾನ ನಿಲ್ದಾಣದಲ್ಲೇ ಇರಬೇಕು. ಇದರಿಂದ ಜನರು ಹಲವು ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಕಾಯಬೇಕಾದ ಪರಿಸ್ಥಿತಿ ಇದೆ.

ಇನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ)ದ ಅಡಿಯಲ್ಲಿ ಬರುವ ದೇಶದ 11 ವಿಮಾನ ನಿಲ್ದಾಣಗಳಲ್ಲಿ ಬುಧವಾರ ಒಟ್ಟು 1,502 ಅಂತಾ ರಾಷ್ಟ್ರೀಯ ಪ್ರಯಾಣಿಕರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ.