Sunday, 15th December 2024

ಮಹಾರಾಷ್ಟ್ರದಲ್ಲಿ 62 ಹಂದಿ ಜ್ವರ ಪ್ರಕರಣ ಪತ್ತೆ

ಮುಂಬೈ: ಮಹಾರಾಷ್ಟ್ರದ ಮುಂಬೈ, ಠಾಣೆ, ಫಲ್ಗರ್ ಮತ್ತು ರಾಯಗಢ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ 62 ಹಂದಿ ಜ್ವರ ಪ್ರಕರಣಗಳು ಪತ್ತೆಯಾಗಿದೆ.

ಜನವರಿಯಿಂದ ಜುಲೈ 24ರವರೆಗೂ ಒಟ್ಟು 1,66,13 ಜನರನ್ನು ತಪಾಸಣೆ ನಡೆಸಲಾಗಿದ್ದು, 62 ಜನರಲ್ಲಿ ಹೆಚ್ 1ಎನ್ 1 ಸೋಂಕು ಪತ್ತೆಯಾಗಿದೆ ಎಂದು ಮುಂಬೈ ಆರೋಗ್ಯ ಸೇವಾ ವಿಭಾಗದ ಉಪ ನಿರ್ದೇಶಕ ಡಾ.ಗೌರಿ ರಾಥೋಡ್ ಮಾಹಿತಿ ನೀಡಿದ್ದಾರೆ.

ಕಳೆದ ವಾರ ಸೋಂಕಿನಿಂದ ಥಾಣೆಯಲ್ಲಿ ಇಬ್ಬರು ರೋಗಿಗಳು ಮೃತ ಪಟ್ಟಿದ್ದಾರೆ. ಈ ವರ್ಷ ಸೋಂಕಿನಿಂದ ಮುಂಬೈ ವಲಯದಲ್ಲಿ ಸಂಭವಿಸಿದ ಮೊದಲ ಸಾವು ಇದಾಗಿದೆ. ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.