ನವದೆಹಲಿ: ಸುಮಿ ನಗರದಿಂದ 694 ಭಾರತೀಯ ವಿದ್ಯಾರ್ಥಿಗಳು ಬಸ್ ಮೂಲಕ ಪೋಲ್ಟ್ವಾಗೆ ಹೊರಟಿದ್ದಾರೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಕಳೆದ ರಾತ್ರಿ ಪರಿಶೀಲನೆ ಮಾಡಿದ್ದೇನೆ 694 ಭಾರತೀಯ ವಿದ್ಯಾರ್ಥಿಗಳು ಬಸ್ ಮೂಲಕ ನಿರ್ಗಮಿಸಿದ್ದಾರೆ ಎಂದು ಪುರಿ ಹೇಳಿದ್ದಾರೆ. ರಷ್ಯಾದ ಮತ್ತು ಉಕ್ರೇ ನಿಯನ್ ಅಧಿಕಾರಿಗಳು ಕೆಲ ನಗರಗಳಿಂದ ನಾಗರಿಕರಿಗೆ ಆಚೆ ಹೋಗಲು ‘ಮಾನವೀಯ ಕಾರಿಡಾರ್’ ಗಳನ್ನು ಸ್ಥಾಪಿಸಲು ಒಪ್ಪಿಕೊಂಡ ನಂತರ ಸ್ಥಳಾಂತ ರಿಸುವಿಕೆ ಪ್ರಾರಂಭವಾಗಿದೆ.
ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಜೊತೆ ಚರ್ಚೆ ನಡೆಸಿ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಮನವಿ ಮಾಡಿದ್ದರು.
ಭಾರತ ಈ ವರೆಗೂ 17,100 ನಾಗರಿಕರನ್ನು ಉಕ್ರೇನ್ ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಿದೆ.