Sunday, 15th December 2024

6ನೇ ಹಂತ: ಶೇ.8.69ರಷ್ಟು ಮತದಾನ

ಲಖನೌ: ಉತ್ತರ ಪ್ರದೇಶ ರಾಜ್ಯದಲ್ಲಿ ಗುರುವಾರ 6ನೇ ಹಂತದ ಮತದಾನ ಆರಂಭಗೊಂಡಿದ್ದು, ಈವರೆಗೂ ಶೇ.8.69ರಷ್ಟು ಮತದಾನವಾಗಿದೆ.

ಅತೀವ್ರ ಚಳಿಯಿದ್ದರೂ ಕೂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿದ್ದಾರೆ.

6ನೇ ಹಂತದ ಚುನಾವಣೆಯಲ್ಲಿ 10 ಜಿಲ್ಲೆಗಳಲ್ಲಿ ಹಂಚಿಹೋಗಿರುವ 67 ಸ್ಥಾನಗಳಲ್ಲಿ ಬಿಜೆಪಿ, ಎಸ್’ಪಿ, ಕಾಂಗ್ರೆಸ್, ಬಿಎಸ್’ಪಿ ಸೇರಿದಂತೆ 676 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಗೋರಖ್ ಪುರ, ಅಂಬೇಡ್ಕರ್ ನಗರ, ಬಲರಾಮ್ ಪುರ, ಸಿದ್ಧಾರ್ಥ್ ನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜಾ ಗಂಜ್, ಕುಶಿ ನಗರ, ದಿಯೋರಿಯಾ ಹಾಗೂ ಬಲ್ಲಿಯಾ ಈ 10 ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ.

6ನೇ ಹಂತದ ಚುನಾವಣೆಗೆ ಒಳಪಟ್ಟ ಈ 57 ಕ್ಷೇತ್ರಗಳಲ್ಲಿ 2017ರಲ್ಲಿ 46 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು. ಕೊನೆಯ ಹಂತದ ಚುನಾವಣೆಯು ಮಾ.10 ರಂದು ನಡೆಯಲಿದೆ.