Thursday, 24th October 2024

ಆರನೇ ವಂದೇ ಭಾರತ್ ಎಕ್ಸ್’ಪ್ರೆಸ್‌ಗೆ ಪ್ರಧಾನಿ ಚಾಲನೆ

ನವದೆಹಲಿ: ಮಹಾರಾಷ್ಟ್ರ ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಭೇಟಿ ನೀಡಿದ್ದು, ನಾಗ್ಪುರ ಮತ್ತು ಛತ್ತೀಸ್ಗಢದ ಬಿಲಾಸ್ಪುರ ನಡುವೆ ಸಂಚರಿಸಲಿರುವ ಆರನೇ ವಂದೇ ಭಾರತ್ ಎಕ್ಸ್’ಪ್ರೆಸ್‌ಗೆ ಭಾನುವಾರ ಚಾಲನೆ ನೀಡಿದರು.
ಮಹಾರಾಷ್ಟ್ರ ರಾಜ್ಯ ಭೇಟಿ ನೀಡಿದ ಮೋದಿಯವರನ್ನು ಮಹಾರಾಷ್ಟ್ರ ರಾಜ್ಯಪಾಲ ಕೊಶಿಯಾರಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯ ಮಂತ್ರಿ ದೇವೇಂದ್ರ ಫಡಣಾವೀಸ್ ಆತ್ಮೀಯವಾಗಿ ಬರಮಾಡಿಕೊಂಡರು.
ನಂತರ ಮೋದಿಯವರು ನಾಗ್ಪುರ ಮತ್ತು ಛತ್ತೀಸ್ಗಢದ ಬಿಲಾಸ್ಪುರ ನಡುವೆ ಸಂಚರಿಸ ಲಿರುವ ವಂದೇ ಭಾರತ್ ಎಕ್ಸ್’ಪ್ರೆಸ್‌ಗೆ ಚಾಲನೆ ನೀಡಿದರು. ರೈಲಿಗೆ ಚಾಲನೆ ನೀಡಿದ ಬಳಿಕ ಮೋದಿಯವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರತ್ತ ಕೈ ಬೀಸಿದರು. ಇದೇ ವೇಳೆ ಪ್ರಧಾನಮಂತ್ರಿಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಅಡಿಗಲ್ಲು ಹಾಕಿದರು.
ಮೋದಿಯವರು ಚಾಲನೆ ನೀಡಿರುವ ಈ ರೈಲು ಬೆಳಗ್ಗೆ ಬಿಲಾಸ್ಪುರದಿಂದ ಹೊರಟು ಮಧ್ಯಾಹ್ನ 12.15ಕ್ಕೆ ನಾಗ್ಪುರ ತಲುಪಲಿದೆ. ಅದೇ ರೀತಿ ನಾಗ್ಪುರದಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ರಾತ್ರಿ 7.35ಕ್ಕೆ ಬಿಲಾಸ್ಪುರ ತಲುಪಲಿದೆ. ಸೂಪರ್ಫಾಸ್ಟ್ ರೈಲುಗಳು ನಾಗಪುರವನ್ನು ತಲುಪಲು ಸುಮಾರು ಏಳು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ವಂದೇ ಭಾರತ್ ರೈಲು ಈ ವರ್ಷದ ಅಕ್ಟೋಬರ್ನಲ್ಲಿ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಮೊದಲ ಬಾರಿಗೆ ಉದ್ಘಾಟನೆ ಗೊಂಡಿತು. ಮುಂದಿನ ವರ್ಷ ಆಗಸ್ಟ್ ವೇಳೆಗೆ 75 ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸುವ ಗುರಿಯನ್ನು ರೈಲ್ವೇ ಹೊಂದಿದೆ.

ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಫೆಬ್ರವರಿ 15, 2019 ರಂದು ನವದೆಹಲಿ-ಕಾನ್ಪುರ-ಅಲಹಾಬಾದ್-ವಾರಣಾಸಿ ಮಾರ್ಗದಲ್ಲಿ ಚಾಲನೆ ನೀಡಲಾಯಿತು.