Sunday, 15th December 2024

ಉ.ಪ್ರದೇಶ ಚುನಾವಣೆ: ಮೊದಲ ಹಂತ, ಈವರೆಗೂ ಶೇ.7.95ರಷ್ಟು ಮತದಾನ

ನೋಯ್ಡಾ: ಉತ್ತರ ಪ್ರದೇಶ ರಾಜ್ಯದಲ್ಲಿ ಗುರುವಾರ ಮೊದಲ ಹಂತದ ಮತದಾನ ಶುರುವಾಗಿದ್ದು, ಈವರೆಗೂ ಶೇ.7.95ರಷ್ಟು ಮತದಾನವಾಗಿದೆ.

ಚಳಿಯಿದ್ದರೂ ಕೂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡುತ್ತಿರುವುದು ಕಂಡು ಬಂದಿದೆ.

ಚುನಾವಣಾ ಆಯೋಗದ ಪ್ರಕಾರ, ಮಥುರಾ ವಿಧಾನಸಭಾ ಕ್ಷೇತ್ರದಲ್ಲಿ ಶೇ.8.23 ರಷ್ಟು ಮತದಾನವಾಗಿದ್ದರೆ, ಆಗ್ರಾದಲ್ಲಿ ಶೇ.7.64 ರಷ್ಟು ಮತ್ತು ಬಾಗ್ಪತ್ ಕ್ಷೇತ್ರದಿಂದ ಶೇ.8.93 ರಷ್ಟು ಮತದಾನವಾಗಿದೆ. ಅಲಿಗಢ್ ಕ್ಷೇತ್ರದಲ್ಲಿ ಶೇ 8.39 ರಷ್ಟು ಮತದಾನವಾಗಿದ್ದರೆ, ಗೌತಮ್ ಬುದ್ಧ ನಗರದಲ್ಲಿ ಶೇ 8.07 ರಷ್ಟು ಮತದಾನವಾಗಿದೆ ಎಂದು ತಿಳಿಸಿದೆ.

ದೇಶದಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿದೆ. ಆಗ್ರಾ, ಮಥುರಾ, ಅಲಿಗಢ, ಬಾಘಪತ್, ಗೌತಮಬುದ್ಧ ನಗರ ಸೇರಿ 11 ಜಿಲ್ಲೆಗಳ 58 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

58 ಕ್ಷೇತ್ರಗಳಲ್ಲಿ 623 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, 2.27 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.