Sunday, 13th October 2024

ಹಿಮಕುಸಿತ: ಪರ್ವತಾರೋಹಿ ಸವಿತಾ ಸೇರಿ ಏಳು ಮಂದಿ ಸಾವು

ತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಮಂಗಳವಾರ ಸಂಭವಿಸಿದ ಹಿಮಕುಸಿತದಲ್ಲಿ ಪರ್ವತಾರೋಹಿ ಸವಿತಾ ಕನ್ಸವಾಲ್ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.

ಈ ವೇಳೆ 25 ಜನರು ನಾಪತ್ತೆಯಾಗಿದ್ದು, 8 ಮಂದಿ ಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರ್ವತಾರೋಹಿ ಸವಿತಾ ಈ ವರ್ಷದ ಮೇ ತಿಂಗಳಲ್ಲಿ ಮೌಂಟ್ ಎವರೆಸ್ಟ್ (8848 ಮೀಟರ್) ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಮೌಂಟ್ ಮಕಾಲು ಪರ್ವತ(8463 ಮೀಟರ್)ವನ್ನು 15 ದಿನಗಳಲ್ಲಿ ಯಶಸ್ವಿಯಾಗಿ ಏರುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ್ದರು.

ನಿಮ್ಸ್‌ ಅಡ್ವಾನ್ಸ್‌ಡ್‌ ಮೌಂಟನೇರಿಂಗ್‌ ಕೋರ್ಸ್‌ಗೆ ತೆರಳಿದ್ದ ಬೋಧಕರಲ್ಲಿ ಒಬ್ಬರಾದ ಪರ್ವತಾರೋಹಿ ಸವಿತಾ ಹಿಮಕುಸಿತ ದಲ್ಲಿ ಸಮಾಧಿಯಾದರು ಎಂದು ನಿಮ್‌ ಪ್ರಿನ್ಸಿಪಾಲ್‌ ಅಮಿತ್‌ ಬಿಶ್ತ್‌ ಖಚಿತಪಡಿಸಿದ್ದಾರೆ.

ಸವಿತಾ ಉತ್ತರಕಾಶಿ ಜಿಲ್ಲೆಯ ಉದಯೋನ್ಮುಖ ಪರ್ವತಾರೋಹಿ. ಸವಿತಾ ಈ ಶಿಖರದಲ್ಲಿ ಪರ್ವತಾರೋಹಿಗಳಿಗೆ ಬೋಧಕರಾಗಿ ಕೆಲಸ ಮಾಡುತ್ತಿದ್ದರು.