Thursday, 12th December 2024

ರಸ್ತೆ ಅಪಘಾತ: ಶಾಸಕನ ಪುತ್ರ ಸೇರಿ ಏಳು ಮೆಡಿಕಲ್ ವಿದ್ಯಾರ್ಥಿಗಳ ಸಾವು

ಮುಂಬೈ: ಬಿಜೆಪಿ ಶಾಸಕನ ಪುತ್ರ ಸೇರಿದಂತೆ ಏಳು ಮಂದಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸೋಮವಾರ ರಾತ್ರಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿ ದ್ದಾರೆ.
ಕೇಂದ್ರ ಸರ್ಕಾರವು ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ 50 ಸಾವಿರ ರೂ.ಪರಿಹಾರ ಘೋಷಿಸಲಾಗಿದೆ.

ವಿದ್ಯಾರ್ಥಿಗಳು ಮಹಾರಾಷ್ಟ್ರದ ವಡೋದರಾದ ಸೆಲ್ಸುರಾ ಮೂಲಕ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಯಲ್ಲಿ ಇದ್ದಕ್ಕಿದ್ದಂತೆ ಕಾಡು ಪ್ರಾಣಿ ಕಾಣಿಸಿಕೊಂಡಿದೆ. ಮಾಹಿತಿಯ ಪ್ರಕಾರ ಕಾಡು ಪ್ರಾಣಿಯನ್ನು ತಪ್ಪಿಸುವ ಸಲುವಾಗಿ ಕಾರಿನ ಚಕ್ರವನ್ನು ಬಲಕ್ಕೆ ತಿರುಗಿಸಿದ ಪರಿಣಾಮ ಕಾರು ಕಂದಕದಲ್ಲಿ ಬಿದ್ದಿದೆ. ಪರಿಣಾಮ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವಾರ್ಧಾ ಎಸ್ಪಿ ಪ್ರಶಾಂತ್​ ಹೋಳ್ಕರ್​ ಮಾಹಿತಿ ನೀಡಿದ್ದಾರೆ.

ಮೃತ 7 ಮಂದಿ ಮೆಡಿಕಲ್​ ಕಾಲೇಜು ವಿದ್ಯಾರ್ಥಿಗಳಲ್ಲಿ ತಿರೋರಾ ಕ್ಷೇತ್ರದ ಶಾಸಕ ವಿಜಯ್​​ ರಹಗ್ದಲೆ ಪುತ್ರ ಆವಿಷ್ಕಾರ್​ ಕೂಡ ಇದ್ದಾನೆ ಎಂದು ತಿಳಿದು ಬಂದಿದೆ. ಇತರೆ ವಿದ್ಯಾರ್ಥಿಗಳನ್ನು ನೀರಜ್​ ಚೌಹಾಣ್​, ನಿತೇಶ್​ ಸಿಂಗ್​, ವಿವೇಕ್ ನಂದನ್​, ಪ್ರತ್ಯುಷ್​​ ಸಿಂಗ್​, ಶುಭಂ ಜೈಸ್ವಾಲ್​ ಹಾಗೂ ಪವನ್​ ಶಕ್ತಿ ಎಂದು ಗುರುತಿಸಲಾಗಿದೆ.