ಸರಿಯಾಗಿ ಒಂದು ವಾರದ ಹಿಂದೆ ಫೆ.10ರಂದು – BSF ಇದೇ ಸ್ಥಳದಿಂದ 6 ಪಾಕಿಸ್ತಾನಿ ಮೀನುಗಾರ ರನ್ನು ಬಂಧಿಸಿತ್ತು. ಹಾಗೇ ಆ ಮೀನುಗಾರರಿಗೆ ಸಂಬಂಧಿಸಿದ 11 ದೋಣಿಗಳನ್ನು ವಶಪಡಿಸಿಕೊಳ್ಳ ಲಾಗಿತ್ತು. ಕೊಳೆತ ಮೀನುಗಳೊಂದಿಗೆ ಇನ್ನೂ 7 ಪಾಕಿಸ್ತಾನಿ ಮೀನುಗಾರಿಕಾ ಬೋಟ್ಗಳನ್ನು ಹರಾಮಿ ನಲ್ಲಾದಲ್ಲಿ ಬಿಎಸ್ಎಫ್ ವಶಪಡಿಸಿಕೊಂಡಿದೆ.
ಪಾಕಿಸ್ತಾನಿ ಮೀನುಗಾರಿಕಾ ದೋಣಿಗಳು ಭಾರತದ ಜಲಗಡಿಗಳೊಳಗೆ ಒಳನುಸುಳುವಿಕೆಯ ವಿರುದ್ಧ ಬಿಎಸ್ಎಫ್ ಕಾರ್ಯಾಚರಣೆ ಪ್ರಾರಂಭಿಸಿದೆ. ಬಿಎಸ್ಎಫ್ ಗಸ್ತು ಬೋಟ್ಗಳನ್ನು ಪತ್ತೆ ಹಚ್ಚಿದರೆ ಅವರು ತಮ್ಮ ಮೀನುಗಾರಿಕಾ ದೋಣಿಗಳನ್ನು ಬಿಟ್ಟು ಪಾಕಿಸ್ತಾನದ ಕಡೆಗೆ ತಪ್ಪಿಸಿಕೊಳ್ಳುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.