Sunday, 15th December 2024

ಟೆಲಿಗ್ರಾಮ್’ಗೆ ಒಂದೇ ದಿನದಲ್ಲಿ 70 ದಶಲಕ್ಷ ಹೊಸ ಬಳಕೆದಾರರ ಎಂಟ್ರಿ

ನವದೆಹಲಿ: ಸೋಮವಾರದ ಫೇಸ್ ಬುಕ್ ಸ್ಥಗಿತದ ಸಮಯದಲ್ಲಿ ಮೆಸೇಜಿಂಗ್ ಅಪ್ಲಿಕೇ ಶನ್ ಟೆಲಿಗ್ರಾಮ್ 70 ದಶಲಕ್ಷಕ್ಕೂ ಹೆಚ್ಚು ಹೊಸ ಬಳಕೆದಾರರನ್ನು ಗಳಿಸಿದೆ ಎಂದು ಸಂಸ್ಥಾಪಕ ಡುರೋವ್ ಹೇಳಿದರು.

ವಿಶ್ವದಾದ್ಯಂತ ಜನರು ಸುಮಾರು ಆರು ಗಂಟೆಗಳ ಕಾಲ ಪ್ರಮುಖ ಸಂದೇಶ ಸೇವೆಗಳಿಲ್ಲದೆ ಪರದಾಡಿದರು.

ಫೇಸ್ ಬುಕ್ ಸ್ಥಗಿತಗೊಂಡ ಪರಿಣಾಮ 3.5 ಬಿಲಿಯನ್ ಬಳಕೆದಾರರನ್ನು ವಾಟ್ಸಪ್, ಇನ್ ಸ್ಟಾಗ್ರಾಮ್ ಮತ್ತು ಮೆಸೆಂಜರ್ ನಂತಹ ಸೇವೆಗಳನ್ನು ಪ್ರವೇಶಿಸದಂತೆ ತಡೆಯಿತು. ಒಂದೇ ದಿನದಲ್ಲಿ ಇತರ ವೇದಿಕೆಗಳಿಂದ 70 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಳಕೆ ಮಾಡುವಂತೆ ಮಾಡಿತು ಎಂದು ದುರೋವ್ ತಮ್ಮ ಟೆಲಿಗ್ರಾಮ್ ಚಾನೆಲ್ ನಲ್ಲಿ ಬರೆದಿದ್ದಾರೆ.

ನಾವು ಒಂದೇ ದಿನದಲ್ಲಿ ಇತರ ವೇದಿಕೆಗಳಿಂದ 70 ದಶಲಕ್ಷಕ್ಕೂ ಹೆಚ್ಚು ಜನರನ್ನು ಸ್ವಾಗತಿಸಿದ್ದೇವೆ. ನಮ್ಮ ತಂಡವು ಅಭೂತ ಪೂರ್ವ ಬೆಳವಣಿಗೆಯನ್ನು ಹೇಗೆ ನಿಭಾಯಿಸಿತು ಎಂಬುದರ ಬಗ್ಗೆ ನನಗೆ ಹೆಮ್ಮೆಯಿದೆ. ಏಕೆಂದರೆ ಟೆಲಿಗ್ರಾಮ್ ನಮ್ಮ ಹೆಚ್ಚಿನ ಬಳಕೆದಾರ ರಿಗೆ ದೋಷರಹಿತವಾಗಿ ಕೆಲಸ ಮಾಡುವುದನ್ನು ಮುಂದುವರಿಸಿತು ಎಂದು ಹೇಳಿದರು.