Friday, 22nd November 2024

ಓಮೈಕ್ರಾನ್ ಬ್ರೇಕಿಂಗ್: ಕೇರಳದಲ್ಲಿ 76 ಹೊಸ ಪ್ರಕರಣ ಪತ್ತೆ

ತಿರುವನಂತಪುರಂ : ಓಮೈಕ್ರಾನ್ ರೂಪಾಂತರದಿಂದಾಗಿ ಕೇರಳವು ಬುಧವಾರ 76 ಹೊಸ ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ಓಮಿಕ್ರಾನ್ ಹೊರ ಹೊಮ್ಮಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಕ್ಲಸ್ಟರ್ ವರದಿಯಾಗಿದೆ. ದೃಢಪಡಿಸಿದ 76 ಹೊಸ ಪ್ರಕರಣ ಗಳಲ್ಲಿ, 59 ಕಡಿಮೆ-ಅಪಾಯದ ದೇಶಗಳಿಂದ, ಏಳು ಹೆಚ್ಚಿನ ಅಪಾಯದ ದೇಶಗಳಿಂದ ಪ್ರಯಾಣಿಸಿದ್ದಾರೆ ಮತ್ತು ಒಂಬತ್ತು ಸೋಂಕಿತರಿಗೆ ಸಂಪರ್ಕದ ಮೂಲಕ ಒಮೈಕ್ರಾನ್ ತಗುಲಿದೆ.

ಕೇರಳದಲ್ಲಿ 421 ಒಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಅವರಲ್ಲಿ 290 ಜನರು ಕಡಿಮೆ ಅಪಾಯದ ದೇಶಗಳಿಂದ ಪ್ರಯಾಣಿಸಿದವರು.ಏತನ್ಮಧ್ಯೆ, ಕೇರಳದಲ್ಲಿ ಪ್ರಕರಣಗಳು ಹೆಚ್ಚಿವೆ ಮತ್ತು ಕಳೆದ ವಾರದಲ್ಲಿ ಪರೀಕ್ಷಾ ಸಕಾರಾತ್ಮಕತೆಯ ದರವು ಶೇ.4 ರಿಂದ 14 ಕ್ಕೆ ಏರಿದೆ.