Sunday, 8th September 2024

ಉತ್ತರ ಪ್ರದೇಶ ಚುನಾವಣೆ: ಶೇ.8.5ರಷ್ಟು ಮತದಾನ

ಲಕ್ನೊ: ಉತ್ತರ ಪ್ರದೇಶ ವಿಧಾನಸಭೆಯ ಕೊನೆಯ ಹಂತದ ಮತದಾನ ಸೋಮವಾರ ನಡೆಯುತ್ತಿದ್ದು, 54 ಸ್ಥಾನಗಳಿಗೆ ಮಂದಗತಿಯಲ್ಲಿ ಮತದಾನ ಆರಂಭವಾಯಿತು. ಬೆಳಗ್ಗೆ 9 ಗಂಟೆಯ ಹೊತ್ತಿಗೆ ಶೇ.8.5ರಷ್ಟು ಮತದಾನವಾಗಿದೆ.

ಚಕಿಯಾ (ಚಂದೌಲಿ), ರಾಬರ್ಟ್ಸ್‌ಗಂಜ್ ಮತ್ತು ದುದ್ಧಿ (ಸೋನ್‌ಭದ್ರ) ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾಗಿ ಸಂಜೆ 4 ಗಂಟೆಗೆ ಕೊನೆಗೊಳ್ಳಲಿದೆ. ಉಳಿದ ಭಾಗಗಳಲ್ಲಿ ಸಂಜೆ 6 ಗಂಟೆಯವರೆಗೆ ಮುಂದುವರಿಯುತ್ತದೆ. ಈ ಹಂತದಲ್ಲಿ ಚುನಾವಣೆ ನಡೆಯು ತ್ತಿರುವ ಜಿಲ್ಲೆಗಳೆಂದರೆ ಅಜಂಗಢ, ಮೌ, ಜೌನ್‌ಪುರ್, ಗಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾ ಪುರ, ಭದೋಹಿ ಮತ್ತು ಸೋನ್‌ಭದ್ರ.

ಅಜಂಗಢದಲ್ಲಿ ಶೇ.8.08 ಮತದಾನ ನಡೆದರೆ, ಭದೋಹಿ ಶೇ.7.41, ಚಂದೌಲಿ ಶೇ.8.39, ಗಾಜಿಪುರ ಶೇ.8.39, ಜಾನ್‌ಪುರ್ ಶೇ.8.99, ಮೌ 9.97, ಮಿರ್ಜಾಪುರ ಶೇ.8.81, ಸೋನ್‌ಭದ್ರ ಶೇ.8.39, ವಾರಾನಾ ಶೇ.8.39 ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ವಾರಣಾಸಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟು 613 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದಲ್ಲಿ 403 ವಿಧಾನಸಭಾ ಸ್ಥಾನಗಳಿದ್ದು, ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

error: Content is protected !!