ಪಾಟ್ನಾ: ಕಾರ್ಮಿಕ ಇಲಾಖೆಯ ಬ್ಲಾಕ್ ಮಟ್ಟದ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿದ ಮಾಡಿರುವ ಸರ್ಕಾರದ ವಿಜಿಲೆನ್ಸ್ ಇನ್ವೆಸ್ಟಿಗೇಷನ್ ಬ್ಯೂರೋ ಅಧಿಕಾರಿಗಳು, 1.75 ಕೋಟಿ ನಗದು, ಚಿನ್ನಾಭರಣಗಳು ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆದಾಯದ ಅನುಗುಣವಾಗಿ 8 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಸಂಗ್ರಹಿಸಿ ದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ವಿಜಿಲೆನ್ಸ್ ಸಿಬ್ಬಂದಿಯ ತಂಡ, ಪಾಟ್ನಾ ಮತ್ತು ಮೋತಿಹಾರಿ ದಲ್ಲಿರುವ ಅಧಿಕಾರಿಯ ಎರಡು ನಿವಾಸ ಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
1.75 ಕೋಟಿ ನಗದು, 48 ಲಕ್ಷ ಮೌಲ್ಯದ 2.2 ಕೆಜಿ ಚಿನ್ನ ಮತ್ತು ಬೆಳ್ಳಿ ಆಭರಣಗಳು, ರಾಷ್ಟ್ರೀಕೃತ ಬ್ಯಾಂಕ್‍ಗಳ ಹಾಗೂ ಅಂಚೆ ಕಚೇರಿಯ 42 ಪಾಸ್‍ಬುಕ್‍ಗಳನ್ನು ಪತ್ತೆ ಮಾಡಲಾಗಿದೆ.
ಕನಿಷ್ಠ 14 ಎಲ್‍ಐಸಿ ಪಾಲಿಸಿಗಳು, 17 ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳು ಮತ್ತು 25 ಭೂಮಿ ಖರೀದಿ ಒಪ್ಪಂದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲಾಖೆಯು 2019ರಲ್ಲಿ ರಸ್ತೆ ನಿರ್ಮಾಣ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರ ಮನೆಯಿಂದ 2.36 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದರು.