Sunday, 15th December 2024

ಮನೆಗಳಿಗೆ ಬೆಂಕಿ ತಗುಲಿ 8 ಮಂದಿ ಸಜೀವ ದಹನ

ಭಿರ್ಭೂಮ್: ಪಶ್ಚಿಮ ಬಂಗಾಳದ ಭಿರ್ಭೂಮ್​ ಜಿಲ್ಲೆಯ ರಾಮ್​ಪುರಹತ್​​ನಲ್ಲಿ ಮನೆಗಳಿಗೆ ಬೆಂಕಿ ತಗುಲಿ 8 ಮಂದಿ ಸಜೀವ ದಹನಗೊಂಡಿದ್ದಾರೆ.

ಬೆಂಕಿಗಾಹುತಿಯಾಗಿದ್ದ ಮನೆಯೊಂದರಿಂದ ಏಳು ಸುಟ್ಟ ದೇಹಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಗಾಯಗೊಂಡಿರುವ ವ್ಯಕ್ತಿಯು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆನ್ನಲಾಗಿದೆ.

ಸೋಮವಾರ ರಾತ್ರಿಯಿಂದ ಗ್ರಾಮದಲ್ಲಿ ಪೊಲೀಸ್​ ತಂಡವನ್ನು ನಿಯೋಜಿಸಿ ದ್ದೇವೆ. ಮನೆಗಳಿಗೆ ಹೇಗೆ ಬೆಂಕಿ ಹೊತ್ತಿಕೊಂಡಿದೆ ಹಾಗೂ ಈ ಅವಘಡಕ್ಕೂ ಮತ್ತು ಪಂಚಾಯತ್​​ ಉಪಾಧ್ಯಕ್ಷರ ಸಾವಿಗೂ ಏನಾ ದರೂ ಸಂಬಂಧವಿದೆಯೇ ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿ ಮಾಳವಿಯಾ ಹೇಳಿದ್ದಾರೆ.