Sunday, 15th December 2024

ಕುಸಿದು ಬಿದ್ದ ಕಲ್ಲು ಕ್ವಾರಿ: ಎಂಟು ಕಾರ್ಮಿಕರ ಮೃತದೇಹ ಪತ್ತೆ

ಮಿಜೋರಾಂ: ಕಲ್ಲು ಕ್ವಾರಿಯೊಂದು ಸೋಮವಾರ ಕುಸಿದು ಬಿದ್ದ ದುರ್ಘಟನೆಯಲ್ಲಿ ಬಿಹಾರದ ಎಂಟು ಕಾರ್ಮಿಕರ ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ. ನಾಲ್ವರು ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಗುರುತಿಸಲಾಗುವುದು. ಕಾಣೆಯಾದವರೆಲ್ಲರೂ ಪತ್ತೆಯಾಗುವವರೆಗೂ ಕಾರ್ಯಾಚರಣೆ ಮುಂದುವರೆ ಯುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಸೋಮವಾರ ಮಿಜೋರಾಂನಲ್ಲಿ ಕಲ್ಲು ಕ್ವಾರಿಯೊಂದು ಕುಸಿದು ಬಿದ್ದ ಪರಿಣಾಮ ಬಿಹಾರದ 12 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ.

ಹ್ನಾಥಿಯಾಲ್ ಜಿಲ್ಲೆಯ ಮೌದರ್ಹ್‌ನಲ್ಲಿರುವ ಖಾಸಗಿ ಕಂಪನಿಯ ಕಾರ್ಮಿಕರು ತಮ್ಮ ಊಟದ ವಿರಾಮದಿಂದ ಮರಳಿ ಕಲ್ಲು ಕ್ವಾರಿ ಒಳಗೆ ಪ್ರವೇಶಿಸಿದ್ದರು. 12 ಕಾರ್ಮಿಕರು, ಐದು ಹಿಟಾಚಿ ಯಂತ್ರಗಳು ಮತ್ತು ಇತರ ಡ್ರಿಲ್ಲಿಂಗ್ ಯಂತ್ರಗಳು ಕ್ವಾರಿಯ ಅಡಿಯಲ್ಲಿ ಹೂತು ಹೋಗಿದ್ದವು ಎಂದು ವರದಿ ಮಾಡಿವೆ.

ಲೀಟ್ ಗ್ರಾಮ ಮತ್ತು ಹ್ನಾಹಿಯಾಲ್ ಪಟ್ಟಣದ ಸ್ವಯಂಸೇವಕರು ತಕ್ಷಣ ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ತಲುಪಿದರು.