Friday, 22nd November 2024

ಸುಕ್ಮಾ ಜಂಟಿ ಕಾರ್ಯಾಚರಣೆ: ಶಂಕಿತ ಮಾವೋವಾದಿಗಳ ಬಂಧನ

ರಾಯ್‌ಪುರ: ದಕ್ಷಿಣ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಮೋರೆಪಲ್ಲಿ ಅರಣ್ಯ ಪ್ರದೇಶ ದಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎಂಟು ಶಂಕಿತ ಮಾವೋವಾದಿಗಳನ್ನು ಬಂಧಿಸಲಾಗಿದೆ.

ಬಂಧಿತ ನಕ್ಸಲರಿಂದ ನಾಲ್ಕು ಸುಧಾರಿತ ಸ್ಫೋಟಕ ಸಾಧನಗಳು, ಡಿಟೋನೇಟರ್‌ ಗಳು, ಬ್ಯಾಟರಿಗಳು, ಕೆಲವು ಶಸ್ತ್ರಾಸ್ತ್ರಗಳು, ಮಾವೋವಾದಿ ಸಾಹಿತ್ಯ ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.

ನ.2ರಿಂದ ರಕ್ಷಣಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು. ಇದೀಗ ಒಟ್ಟು 8 ಮಂದಿಯನ್ನ ಬಂಧಿಸಲಾಗಿದೆ ಎಂದು ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಶರ್ಮಾ ಹೇಳಿದ್ದಾರೆ.

ಇವರಿಬ್ಬರ ತಲೆಗೆ ಕ್ರಮವಾಗಿ, 8 ಮತ್ತು 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಇತರೆ ಆರೋಪಿಗಳ ಸುಳಿವು ನೀಡಿದ್ದವರಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

ಬಂಧಿಸಲಾದ ಎಲ್ಲಾ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. 35 ಡಿಟೋನೇಟರ್‌ಗಳು, 6 ಜಿಲೆಟಿನ್ ರಾಡ್‌ಗಳು, ಎರಡು ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು), ಬ್ಯಾಟರಿಗಳು, ವೈರ್‌ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳ ಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.