ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ತಮ್ಮ ತವರು ರಾಜ್ಯ ಮಧ್ಯಪ್ರದೇಶದಲ್ಲಿ ಉಡಾನ್ ಯೋಜನೆಯಲ್ಲಿ ರಾಜ್ಯಕ್ಕೆ ಇನ್ನಷ್ಟು ವಿಮಾನಗಳ ಸಂಚಾರ ಆರಂಭಿಸುವುದಾಗಿ ಹೇಳಿದ್ದಾರೆ.
ಉಡಾನ್ ಯೋಜನೆಯಲ್ಲಿ ಮಧ್ಯಪ್ರದೇಶದಲ್ಲಿ ಜು.16ರಿಂದ ಹೊಸದಾಗಿ 8 ವಿಮಾನಗಳು ಸಂಚಾರ ಆರಂಭಿಸಲಿವೆ. ಗ್ವಾಲಿಯರ್-ಮುಂಬೈ-ಗ್ವಾಲಿಯರ್, ಗ್ವಾಲಿಯರ್-ಪುಣೆ-ಗ್ವಾಲಿಯರ್, ಜಬಲ್ಪುರ-ಸೂರತ್-ಜಬಲ್ಪುರ, ಅಹಮದಾಬಾದ್-ಗ್ವಾಲಿಯರ್ ಅಹಮದಾಬಾದ್ ಮಾರ್ಗದಲ್ಲಿ ವಿಮಾನಗಳು ಸಂಚರಿಸಲಿವೆ. ಹೊಸ ವಿಮಾನಗಳನ್ನು ಸ್ಪೈಸ್ ಜೆಟ್ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಸಚಿವಾಲಯವು ಮತ್ತು ವಾಯುಯಾನ ಉದ್ಯಮವು ಉಡಾನ್ ಯೋಜನೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಬದ್ಧವಾಗಿದೆ ಎಂದುಹೇಳಿದ್ದಾರೆ.
ಕಾಂಗ್ರೆಸ್ ತೊರೆದ ನಂತರ ಕಳೆದ ವರ್ಷ ಬಿಜೆಪಿಗೆ ಸೇರಿದ ಸಿಂಧ್ಯಾ ಅವರು, 33ನೇ ನಾಗರಿಕ ವಿಮಾನಯಾನ ಸಚಿವರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡರು.