Sunday, 15th December 2024

ಐದನೇ ಹಂತದ ಚುನಾವಣೆ: ಶೇ.8ರಷ್ಟು ಮತದಾನ

ಲಕ್ನೊ: ಉತ್ತರ ಪ್ರದೇಶದ 12 ಜಿಲ್ಲೆಗಳಲ್ಲಿ ವ್ಯಾಪಿಸಿರುವ 61 ಕ್ಷೇತ್ರಗಳಿಗೆ ಭಾನುವಾರ ಐದನೇ ಹಂತದ ಚುನಾವಣೆಯಲ್ಲಿ ಮತದಾನ ನಡೆಯುತ್ತಿದೆ.

ಉತ್ತರ ಪ್ರದೇಶದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ.8ರಷ್ಟು ಮತದಾನವಾಗಿದೆ. ಉತ್ತರ ಪ್ರದೇಶದ ಸೆಂಟ್ರಲ್ ಹಾಗೂ ಅವಧ್ ಪ್ರದೇಶದ ಸ್ಥಾನಗಳ ಮೇಲೆ ಬಿಜೆಪಿ ಹಾಗೂ ಮಿತ್ರಪಕ್ಷಗಳು ಭಾರೀ ಪ್ರಭಾವ ಹೊಂದಿವೆ.

ರಾಮ ಮಂದಿರ ನಿರ್ಮಾಣದ ಆಂದೋಲನದ ಕೇಂದ್ರಬಿಂದುವಾಗಿದ್ದ ದೇವಾಲಯ ನಗರ ಅಯೋಧ್ಯೆಯತ್ತ ಎಲ್ಲರ ಕಣ್ಣು ನೆಟ್ಟಿದೆ. ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಪವನ್ ಪಾಂಡೆ ವಿರುದ್ಧ ಬಿಜೆಪಿ ಶಾಸಕ ವಿ.ಪಿ. ಗುಪ್ತಾ ಸ್ಪರ್ಧಿಸಲಿದ್ದಾರೆ.

ಈ ಹಿಂದೆ ಅಲಹಾಬಾದ್‌ ಎಂದು ಕರೆಯಲ್ಪಡುತ್ತಿದ್ದ ಪ್ರಯಾಗ್‌ರಾಜ್ ನಲ್ಲಿ ಮತದಾನ ನಡೆಯುತ್ತಿದೆ. ಹಿಂದಿನ ಕಾಂಗ್ರೆಸ್ ಭದ್ರಕೋಟೆಯಾದ ಅಮೇಠಿ ಯಲ್ಲಿಯೂ ಮತದಾನವಾಗುತ್ತಿದೆ.