Friday, 22nd November 2024

ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ 80 ಮೀಸಲಾತಿ: ಕೇಜ್ರಿವಾಲ್ ಭರವಸೆ

ಪಣಜಿ: ಗೋವಾದಲ್ಲಿ ಆಪ್ ಪಕ್ಷ ಅಧಿಕಾರಕ್ಕೆ ಬಂದರೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ 80 ಮೀಸಲಾತಿ, ಕೌಶಲ ಹೊಂದಿದ ಯುವಕರಿಗೆ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ಹಲವು ಭರವಸೆಗಳನ್ನು ಆಮ್ ಆದ್ಮಿ ಪಕ್ಷ (ಎಎಪಿ) ಈಡೇರಿಸಲಿದೆ ಎಂದು ದೆಹಲಿ ಮುಖ್ಯಮಂ‌ತ್ರಿ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.

ಗೋವಾದಲ್ಲಿ ಖಾಸಗಿ ಉದ್ಯೋಗಗಳು ಗೋವಾದವರಿಗೆ ಮೀಸಲಾಗಿಲ್ಲ. ನಾವು ಅಧಿಕಾರಕ್ಕೆ ಬಂದರೆ ಶೇ 80ರಷ್ಟು ಉದ್ಯೋಗಗಳನ್ನು ಗೋವಾದ ಯುವ ಜನರಿಗೆ ಮೀಸಲಿಡುತ್ತೇವೆ’ ಎಂದರು.

ಗೋವಾದ ಪ್ರತಿ ಮನೆಯಲ್ಲೂ ಒಬ್ಬ ನಿರುದ್ಯೋಗಿ ಯುವಕನಿಗೆ ಉದ್ಯೋಗ ನೀಡುತ್ತೇವೆ. ಯುವಕರಿಗೆ ಉದ್ಯೋಗ ಸಿಗುವವರೆಗೆ, ತಿಂಗಳಿಗೆ ₹3,000 ನಿರು ದ್ಯೋಗ ಭತ್ಯೆ ಕೊಡುತ್ತೇವೆ’ ಎಂದು ಹೇಳಿದರು.

ಪ್ರವಾಸೋದ್ಯಮ ಅವಲಂಬಿತ ಕುಟುಂಬಗಳಿಗೆ ಉದ್ಯೋಗ ಮರುಸ್ಥಾಪಿಸುವವರೆಗೆ ತಿಂಗಳಿಗೆ ₹5,000 ಪರಿಹಾರ ನೀಡಲಾಗುವುದು. ಗಣಿಗಾರಿಕೆ ಅವಲಂಬಿತ ಕುಟುಂಬಗಳಿಗೂ ಗಣಿ ಆರಂಭವಾಗುವವರೆಗೂ ತಿಂಗಳಿಗೆ ₹ 5,000 ನೀಡಲಾಗುವುದು’ ಎಂದರು.

ನಿಮಗೆ ಒರಿಜಿನಲ್‌ (ಮೂಲ) ಲಭ್ಯವಿರುವಾಗ ಡೂಪ್ಲಿಕೇಟ್‌ (ನಕಲು) ಯಾಕೆ ಬೇಕು?’ ಎಂದು ಮತದಾರರನ್ನು ಪ್ರಶ್ನಿಸಿರುವ ಕೇಜ್ರಿವಾಲ್‌, ಎಎಪಿಗೆ ಮತ ನೀಡುವಂತೆ ಗೋವಾ ಮತದಾರರಿಗೆ ಮನವಿ ಮಾಡಿದ್ದಾರೆ.