Sunday, 24th November 2024

ಯೋಗಿ ಸರ್ಕಾರದಿಂದ 841 ಜನ ಸರ್ಕಾರಿ ವಕೀಲರ ವಜಾ

ಲಖನೌ: ಕಾನೂನು ಅಧಿಕಾರಿಗಳ ಕಾರ್ಯಕ್ಷಮತೆ ಸರಿ ಇಲ್ಲದ ಕಾರಣ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ 841 ಜನ ಸರ್ಕಾರಿ ವಕೀಲರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಿ ಆದೇಶಿಸಿದೆ ಎನ್ನಲಾಗಿದೆ.

ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿಕುಂಜ್ ಅವರು ಈ ಆದೇಶ ಹೊರಡಿಸಿದ್ದಾರೆ.

ಅಲಹಾಬಾದ್ ಹೈಕೋರ್ಟ್ ಪೀಠದ ಎಲ್ಲ ಸಾರ್ವಜನಿಕ ಅಭಿಯೋಜಕರು, 505 ಜನ ರಾಜ್ಯ ನ್ಯಾಯಾಂಗ ಅಧಿಕಾರಿಗಳು, ಲಖನೌ ಹೈಕೋರ್ಟ್ ಪೀಠದ 336 ಜನ ಸರ್ಕಾರಿ ವಕೀಲರನ್ನು ವಜಾ ಮಾಡಲಾಗಿದೆ. ಇದರ ಜತೆಗೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿನೋದ್ ಕಾಂತ್ ಅವರನ್ನೂ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

ಪ್ರಯಾಗ್‌ರಾಜ್ ನ್ಯಾಯಾಲಯದ 26 ಹೆಚ್ಚುವರಿ ಕಾಯಂ ವಕೀಲರು, 179 ಜನ ಕಾಯಂ ವಕೀಲರಿಗೆ ಕಡ್ಡಾಯ ರಜೆ ನೀಡಲಾಗಿದೆ. ಇದರ ಜೊತೆಗೆ 59 ಹೆಚ್ಚುವರಿ ಮುಖ್ಯ ಸ್ಥಾಯಿ ಮಂಡಳಿ ಮತ್ತು ಸ್ಥಾಯಿ ಪರಿಷತ್ ಸದಸ್ಯರನ್ನೂ ವಜಾ ಮಾಡಲಾಗಿದೆ.

ಸರ್ಕಾರದ ವಜಾ ಆದೇಶ ಪ್ರತಿಯಲ್ಲಿ ಯಾವುದೇ ನಿಖರವಾದ ಕಾರಣ ಕೊಟ್ಟಿಲ್ಲ.