Sunday, 24th November 2024

8th Pay Commission: ನೌಕರರ ವೇತನ 18,000 ರೂ.ನಿಂದ 34,560 ರೂ.ಗೆ ಹೆಚ್ಚಳ ನಿರೀಕ್ಷೆ!

8th Pay Commission

ಕೇಂದ್ರ ಸರ್ಕಾರಿ ನೌಕರರೆಲ್ಲರೂ (Central government employees ) ಈಗ 8ನೇ ವೇತನ ಆಯೋಗ ರಚನೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಶೀಘ್ರದಲ್ಲೇ 8ನೇ ವೇತನ ಆಯೋಗ (8th Pay Commission) ರಚನೆಯಾಗಲಿರುವುದರಿಂದ ಬಹುಕಾಲದಿಂದ ವೇತನ ಹೆಚ್ಚಳಕ್ಕೆ ( salary hike) ಆಗ್ರಹಿಸುತ್ತಿರುವ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಶುಭ ಸುದ್ದಿಯು ಶೀಘ್ರದಲ್ಲೇ ಸಿಗಲಿದೆ. ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗವನ್ನು ರಚಿಸುತ್ತದೆ. ಈಗ 8 ನೇ ವೇತನ ಆಯೋಗವನ್ನು ರಚಿಸುವ ಸಮಯ.

ಏನೆಲ್ಲ ಬದಲಾವಣೆ?

ಹೊಸ ವೇತನ ಆಯೋಗ ರಚನೆಯಾದ ಬಳಿಕ ಪ್ರಸ್ತುತ ಸರ್ಕಾರಿ ನೌಕರರಿಗಿರುವ ಕನಿಷ್ಠ ವೇತನ 18,000 ರೂ. ನಿಂದ 34,560 ರೂ. ಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಮೂಲಕ ಶೇ. 52ರಷ್ಟು ಹೆಚ್ಚಳವಾಗಲಿದೆ. 8ನೇ ವೇತನ ಆಯೋಗದ ಅಡಿಯಲ್ಲಿ ನೌಕರರ ಸಂಬಳ ಮತ್ತು ನಿವೃತ್ತರ ಪಿಂಚಣಿ ಸೇರಿದಂತೆ ಫಿಟ್‌ಮೆಂಟ್ ಅಂಶವೂ ಹೆಚ್ಚಾಗಲಿದೆ. ಇದರಲ್ಲಿ ಹೆಚ್ಚಳವಾದರೆ ಭತ್ಯೆ ಸೇರಿದಂತೆ ಎಲ್ಲಾ ಉದ್ಯೋಗಿಗಳ ಸಂಬಳದಲ್ಲಿ ಶೇ. 15-20ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಪಿಂಚಣಿದಾರರು ಕೂಡ ಇದರ ಪ್ರಯೋಜನ ಪಡೆಯಲಿದ್ದಾರೆ. ನಿವೃತ್ತಿ ಹೊಂದಿದವರಿಗೆ ಹೆಚ್ಚು ಸುಸ್ಥಿರ ಆರ್ಥಿಕ ಭವಿಷ್ಯವನ್ನು ಒದಗಿಸುವ ಗುರಿಯನ್ನು ಈ ಕ್ರಮವು ಹೊಂದಿದೆ.

ವೇತನ ಹೆಚ್ಚಳ ನಿರೀಕ್ಷೆ

ಇತ್ತೀಚಿನ ಮಾಹಿತಿಗಳ ಪ್ರಕಾರ 8ನೇ ವೇತನ ಆಯೋಗದ ಕುರಿತು ಚರ್ಚಿಸಲು ಜಂಟಿ ಸಲಹಾ ಮಂಡಳಿಯಿಂದ ನವೆಂಬರ್‌ನಲ್ಲಿ ಸಭೆ ನಡೆಯುವ ನಿರೀಕ್ಷೆಯಿದೆ. ಈ ಸಭೆಯಲ್ಲಿ ನೌಕರರ ಸೇವಾ ಸ್ಥಿತಿಗತಿಗಳ ಕುರಿತು ಚರ್ಚೆ ನಡೆಯಲಿದ್ದು, ಕಾರ್ಮಿಕ ಸಂಘಟನೆಗಳು ವೇತನ ಆಯೋಗದ ಬೇಡಿಕೆಗಳನ್ನು ಮಂಡಿಸಲಿವೆ.

8ನೇ ವೇತನ ಆಯೋಗವನ್ನು ಮುಂದಿನ ವರ್ಷದ ಆರಂಭದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಈ ಹಿಂದಿನ ಅಂದರೆ 7ನೇ ವೇತನ ಆಯೋಗ ತನ್ನ ವರದಿಯನ್ನು ಅಂತಿಮಗೊಳಿಸಲು 18 ತಿಂಗಳು ಕಾಲ ಅವಕಾಶ ತೆಗೆದುಕೊಂಡಿತ್ತು. ಇದು 2016ರ ಜನವರಿಯಿಂದ ಜಾರಿಗೆ ಬಂದಿದೆ. ಮುಂಬರುವ ವೇತನ ಆಯೋಗವು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಬಳ ಮತ್ತು ಪಿಂಚಣಿಗಳನ್ನು ಹಣದುಬ್ಬರ ಮತ್ತು ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪರಿಷ್ಕರಿಸುವ ಸಾಧ್ಯತೆಯಿದೆ.

Retirement Plan: ತಿಂಗಳಿಗೆ 5,000 ರೂ. ಉಳಿಸಿ, ನಿವೃತ್ತಿ ವೇಳೆಗೆ ಕೋಟಿ ರೂ. ಗಳಿಸಿ!

ಭಾರತದಲ್ಲಿ, ಕೇಂದ್ರ ಸರ್ಕಾರಿ ನೌಕರರು ತಮ್ಮ ವೇತನವನ್ನು ವೇತನ ಆಯೋಗದ ರಚನೆಯ ಪ್ರಕಾರ ಪಡೆಯುತ್ತಾರೆ. 7ನೇ ಕೇಂದ್ರ ವೇತನ ಆಯೋಗವನ್ನು (CPC) ಕೇಂದ್ರ ಸರ್ಕಾರವು 2014ರ ಫೆಬ್ರವರಿ 28ರಂದು ರಚಿಸಿತ್ತು.