Thursday, 12th December 2024

ಕಾರು – ಲಾರಿ ಡಿಕ್ಕಿಯಾಗಿ 9 ಮಂದಿ ಸಾವು

ಅನಂತಪುರಂ: ಕಾರು ಮತ್ತು ಲಾರಿ ನಡುವೆ ಡಿಕ್ಕಿಯಾಗಿ 9 ಮಂದಿ ಮೃತಪಟ್ಟ ದುರ್ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಬುಡಗಾವಿ ಗ್ರಾಮದ ಬಳಿ ನಡೆದಿದೆ.

ಭಾನುವಾರ ರಾತ್ರಿ ಅಪಘಾತವಾಗಿದ್ದು, ಮೃತರೆಲ್ಲರೂ ಸಂಬಂಧಿಕರೇ ಆಗಿದ್ದಾರೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಮದುವೆಗೆ ಹೋಗಿದ್ದ ಇವರು, ತಮ್ಮ ಉರವಕೊಂಡ ಗ್ರಾಮಕ್ಕೆ ವಾಪಸ್ ಬರು ತ್ತಿದ್ದರು ಎಂದು ಆಂಧ್ರಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತಕ್ಕೆ ಲಾರಿ ಚಾಲಕ ಅತ್ಯಂತ ವೇಗವಾಗಿ ವಾಹನ ಓಡಿಸಿದ್ದೇ ಕಾರಣ. ಈ ಲಾರಿ ಬುಡಗಾವಿ ಬಳಿ ಎಸ್​ಯುವಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ವಾಹನ ಡಿಕ್ಕಿಯಾದ ಪರಿಣಾಮ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬಾತನಿಗೆ ಗಂಭೀರ ಗಾಯಗೊಂಡು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಆತನೂ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮೃತಪಟ್ಟವರಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಕೂಡ ಇದ್ದಾರೆ. ಎಸ್​ಯುವಿ ವಾಹನ ನುಜ್ಜುಗುಜ್ಜಾಗಿದ್ದ ಕಾರಣ ಕಾರಿನಲ್ಲಿದ್ದವರ ಮೃತದೇಹ ಗಳು ಛಿದ್ರವಾಗಿದ್ವು. ಎಂದು ಸ್ಥಳೀಯರು ಮಾಹಿತಿ ಕೊಟ್ಟಿದ್ದಾರೆ.