ಎರಡನೇ ಡೋಸ್ ಪಡೆದು 9 ತಿಂಗಳು ಕಳೆದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ. ಈವರೆಗೂ 12-14 ವರ್ಷದೊಳಗಿನ 2.22 ಕೋಟಿ ಮಕ್ಕಳು ಕೋವಿಡ್-19 ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದೆ.
ಈ ಹಿಂದೆ ಮೊದಲ ಹಾಗೂ ಎರಡನೇ ಡೋಸ್ ಗೆ ಬಳಸಿದ ಲಸಿಕೆಯೇ ಮುನ್ನೆಚ್ಚರಿಕೆ ಡೋಸ್ ಆಗಿದ್ದು, ಖಾಸಗಿ ಲಸಿಕಾ ಕೇಂದ್ರ ಗಳು ಪ್ರತಿ ಡೋಸ್ ಗೆ ಗರಿಷ್ಠ ರೂ. 150 ಸೇವಾ ಶುಲ್ಕ ವಿಧಿಸಬಹುದೆಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾ ಡಳಿತ ಪ್ರದೇಶಗಳಿಗೆ ಸೂಚನೆ ನೀಡಿತ್ತು.