ರಾಜ್ಯದ ಜನತೆ ಪಕ್ಷಕ್ಕೆ ಸಲ್ಲಿಸುವ ಅಭಿಪ್ರಾಯದ ಆಧಾರದ ಮೇಲೆ ಈ ಅಭ್ಯರ್ಥಿಯನ್ನು ಹೆಸರಿಸಲಾಗುವುದು ಎಂದಿದ್ದಾರೆ.
ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಸುದನ್ ಗಧ್ವಿ ಮತ್ತು ಪ್ರಧಾನ ಕಾರ್ಯದರ್ಶಿ ಮನೋಜ್ ಸೊರತಿಹ್ಯ ರೇಸ್ನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 3ರ ಸಂಜೆಯವರೆಗೆ ಜನರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹು ದಾಗಿದ್ದು, ಅವರ ಅಭಿಪ್ರಾಯಗಳ ಆಧಾರದ ಮೇಲೆ ಪಕ್ಷದ ಮುಖ್ಯಮಂತ್ರಿ ಮುಖದ ಹೆಸರನ್ನು ಮರುದಿನ ಪ್ರಕಟಿಸಲಾಗುವುದು ಎಂದು ಹೇಳಿದ್ದರು.
ಆ ಸಮಯದಲ್ಲಿ, ಕೇಜ್ರಿವಾಲ್ ಕೂಡ ‘ಪಂಜಾಬ್ ಚುನಾವಣೆಯ ಸಮಯದಲ್ಲಿ, ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ನಾವು ಜನರನ್ನು ಕೇಳಿದ್ದೆವು, ಜನರು ಭಗವಂತ್ ಮಾನ್ ಅವರನ್ನು ಭಾರಿ ಬಹುಮತದಿಂದ ಹೆಸರಿಸಿದ್ದೇವೆ. ಸಾರ್ವಜನಿಕರ ಇಚ್ಛೆಯಂತೆ ನಾವು ಅವರನ್ನು ಮುಖ್ಯ ಮಂತ್ರಿ ಮಾಡಿದ್ದೇವೆ ಎಂದಿದ್ದರು.
ಗುಜರಾತ್ ಚುನಾವಣೆಗೆ ಎಎಪಿ ತನ್ನ 10 ಅಭ್ಯರ್ಥಿಗಳ ಒಂಬತ್ತನೇ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. ಇದುವರೆಗೆ ಘೋಷಿಸ ಲಾದ ಅಭ್ಯರ್ಥಿಗಳ ಸಂಖ್ಯೆಯನ್ನು 118 ಆಗಿದೆ.
182 ಸದಸ್ಯರ ಗುಜರಾತ್ ವಿಧಾನಸಭೆಗೆ ಮುಂದಿನ ತಿಂಗಳು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 1 ಮತ್ತು 5 ರಂದು, ಮತನಡೆಯಲಿದ್ದ, ಡಿಸೆಂಬರ್ 8 ರಂದು ಎಣಿಕೆಯಾಗಲಿದೆ.