ಮನೋಹರ್ ಪರ್‍ರೀಕರ್ ಅವರ ಮೇಲೆ ನನಗೆ ಮೊದಲಿನಿಂದಲೂ ಅಪಾರ ಗೌರವವಿದೆ. ಉತ್ಪಲ್ ಅವರು ಎಎಪಿ ಸೇರಿ, ಪಕ್ಷದ ಟಿಕೆಟ್ ಮೂಲಕ ಚುನಾವಣೆ ಕಣಕ್ಕಿಳಿಯಲಿ’ ಎಂದು ಟ್ವೀಟಿಸಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಸಹ ಉತ್ಪಲ್ ಅವರಿಗೆ ಪಕ್ಷದ ಟಿಕೆಟ್ ನೀಡಿ ಕಣಕ್ಕಿಳಿಸಲು ಪ್ರಯತ್ನಿಸುತ್ತಿರುವುದಾಗಿ ಮೂಲಗಳಿಂದ ತಿಳಿದು ಬಂದಿರುವುದಾಗಿ ವರದಿ ಮಾಡಿದೆ.
ಗೋವಾದ ಬಿಚೊಲಿಮ್ ಕ್ಷೇತ್ರದಿಂದ ಬಿಜೆಪಿಯು ಉತ್ಪಲ್ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿಲ್ಲ. ಪಕ್ಷದ ಮುಖಂಡರು ಹಾಗೂ ವಿಧಾನಸಭೆಯ ಸಭಾಪತಿ ರಾಜೇಶ್ ಪಟ್ನೇಕರ್ ಅವರನ್ನು ಸ್ಪರ್ಧಿಸುವಂತೆ ಮನವೊಲಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ.
ಮನೋಹರ್ ಪರ್‍ರೀಕರ್ ಅವರು 2019ರಲ್ಲಿ ನಿಧನರಾದ ಬಳಿಕ ಬಿಜೆಪಿಯು ಯುವ ಅಭ್ಯರ್ಥಿ ಸಿದ್ಧಾರ್ಥ್ ಕುಂಚಲೇಂಕರ್ ಅವರನ್ನು ಕಣಕ್ಕಿಳಿಸಿತ್ತು. ಆ ಉಪಚುನಾವಣೆಯಲ್ಲು ಗೋವಾದ ಪ್ರಬಲ ಅಭ್ಯರ್ಥಿ, ಆಗ ಕಾಂಗ್ರೆಸ್‌ನಲ್ಲಿದ್ದ ಅಟನಾಸಿಯೊ ಮಾನ್ಸೆರಟೆ (ಬಾಬುಷ್) ಗೆಲುವು ಸಾಧಿಸಿದ್ದರು.