Friday, 22nd November 2024

ಎಎಪಿ ಮಾಜಿ ನಾಯಕ ಕುಮಾರ್ ವಿಶ್ವಾಸ್’ಗೆ ‘ವೈ’ ಶ್ರೇಣಿ ಭದ್ರತೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಲಿಸ್ತಾನಿ ಎಂದು ಇತ್ತೀಚೆಗೆ ಆರೋಪಿಸಿದ ಎಎಪಿ ಮಾಜಿ ನಾಯಕ ಕುಮಾರ್ ವಿಶ್ವಾಸ್ ಅವರಿಗೆ ಗೃಹ ವ್ಯವಹಾರಗಳ ಸಚಿವಾಲಯ ‘ವೈ’ ಶ್ರೇಣಿ ಭದ್ರತೆ ನೀಡಿದೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತು ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆ ಗಳ ಬೆದರಿಕೆಯಿಂದಾಗಿ ಕುಮಾರ್ ವಿಶ್ವಾಸ್ ಅವರಿಗೆ ಭದ್ರತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ವೈ’ ಶ್ರೇಣಿ ಭದ್ರತೆಯು ಎಂಟು ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಒಬ್ಬರು ಅಥವಾ ಇಬ್ಬರು ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿರಬಹುದು. ಕುಮಾರ್ ವಿಶ್ವಾಸ್ ಅವರ ಸುರಕ್ಷತೆಯ ಜವಾಬ್ದಾರಿಯನ್ನು ಸಿಆರ್ ಪಿಎಫ್ ಸಿಬ್ಬಂದಿ ವಹಿಸ ಲಿದ್ದಾರೆ. ಕೆಲವು ಭದ್ರತಾ ಸಿಬ್ಬಂದಿಗಳು ರಕ್ಷಕರ ನಿವಾಸದಲ್ಲಿ ನೆಲೆಸಿದ್ದರೆ ಇತರರು ಅವರು ಎಲ್ಲಿಗೆ ಹೋದರೂ ರಕ್ಷಕನ ಜೊತೆಯಲ್ಲಿ ಮೂರು ಪಾಳಿಯಲ್ಲಿ ಕೆಲಸ ಮಾಡು ತ್ತಾರೆ.

ಈ ಹಿಂದೆ ಸಂವಾದದ ವೇಳೆ ಅರವಿಂದ್ ಕೇಜ್ರಿವಾಲ್ ಅವರು ಒಂದು ದಿನ ಪಂಜಾಬ್‌ ನ ಮುಖ್ಯಮಂತ್ರಿಯಾಗುತ್ತಾರೆ ಅಥವಾ ಖಾಲಿ ಸ್ತಾನದ ಮೊದಲ ಪ್ರಧಾನಿಯಾಗು ತ್ತಾರೆ ಎಂದು ಹೇಳಿದ್ದರು ಎಂದು ಕುಮಾರ್ ವಿಶ್ವಾಸ್ ಇತ್ತೀಚೆಗೆ ಆರೋಪಿಸಿದ್ದಾರೆ. ವಿಶ್ವಾಸ್ ತಮ್ಮ ಈ ಆರೋಪದಿಂದಾಗಿ ಪಂಜಾಬ್‌ನಲ್ಲಿ ಚುನಾವಣೆ ಎದುರಿಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿ ಯಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನಲ್ಲಿ ನಡೆದ ರ್ಯಾಲಿಯಲ್ಲಿ ಇತ್ತೀಚೆಗೆ ಮಾಡಿದ ಭಾಷಣದಲ್ಲಿ ಕುಮಾರ್ ವಿಶ್ವಾಸ್ ಅವರ ಆರೋಪಗಳನ್ನು ಉಲ್ಲೇಖಿಸಿದ್ದಾರೆ.

ಪಂಜಾಬ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕುಮಾರ್ ವಿಶ್ವಾಸ್ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಅರವಿಂದ್ ಕೇಜ್ರಿವಾಲ್ ಮೌನವನ್ನು ಪ್ರಶ್ನಿಸಿದ್ದರು.

ಪಂಜಾಬ್ ಮುಖ್ಯಮಂತ್ರಿ ಚನ್ನಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಅರವಿಂದ್ ಕೇಜ್ರಿವಾಲ್ ವಿರುದ್ಧ ಕುಮಾರ್ ವಿಶ್ವಾಸ್ ಮಾಡಿರುವ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಮನವಿ ಮಾಡಿದ್ದಾರೆ. ಶುಕ್ರವಾರ ಚನ್ನಿ ಅವರಿಗೆ ಪತ್ರ ಬರೆದಿರುವ ಅಮಿತ್ ಶಾ, ‘ಈ ವಿಚಾರವನ್ನು ವೈಯಕ್ತಿಕವಾಗಿ ಪರಿಶೀಲಿಸುವುದಾಗಿ’ ಹೇಳಿದ್ದಾರೆ. ಆರೋಪಗಳಿಗೆ ಪ್ರತಿಕ್ರಿಯಿಸಿರುವ ಎಎಪಿ, ಕುಮಾರ್ ವಿಶ್ವಾಸ್ ಅವರ ಆರೋಪಗಳನ್ನು ದುರುದ್ದೇಶಪೂರಿತ ಎಂದು ಬಣ್ಣಿಸಿದೆ.

ಪಂಜಾಬ್ ಮುಖ್ಯ ಚುನಾವಣಾ ಆಯುಕ್ತರು ಕುಮಾರ್ ವಿಶ್ವಾಸ್ ಅವರ ವಿಡಿಯೋ ಹೇಳಿಕೆಯನ್ನು ನಿಷೇಧಿಸಿದ್ದರು. ಆದಾಗ್ಯೂ, ನಿಷೇಧವನ್ನು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ತೆಗೆದು ಹಾಕಲಾಯಿತು.