Thursday, 12th December 2024

ಪಂಜಾಬ್ ಎಲೆಕ್ಷನ್‌ 2022 : ‘ಆಮ್ ಆದ್ಮಿ’ ಪಟ್ಟಿ ಬಿಡುಗಡೆ

ಚಂಡೀಗಢ : ಆಮ್ ಆದ್ಮಿ ಪಕ್ಷವು ಪಂಜಾಬ್ ವಿಧಾನಸಭಾ ಚುನಾವಣೆ(2022)ಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ  ಬಿಡುಗಡೆ ಮಾಡಿದೆ.

ಮೊದಲ ಪಟ್ಟಿಯಲ್ಲಿ 10 ಆಭ್ಯರ್ಥಿಗಳನ್ನ ಹೆಸರಿಸಲಾಗಿದ್ದು, ದೆಹಲಿಯಲ್ಲಿ ಆಡಳಿತಾ ರೂಢ ಎಎಪಿ ಕೋಟಕ್ ಪುರ ಸ್ಥಾನದಿಂದ ಕುಲ್ತಾರ್ ಸಿಂಗ್ ಸಂಧವನ್ ಅವರಿಗೆ ಅವಕಾಶ ನೀಡಿದೆ.

ಮತ್ತೊಂದೆಡೆ, ಪಕ್ಷವು ಗುರ್ಮೀತ್ ಸಿಂಗ್ ಅವರನ್ನು ಬರ್ನಾಲಾ ದಿಂದ ನಿಲ್ಲಿಸಿದೆ. ಒಟ್ಟು 10 ಆಭ್ಯರ್ಥಿಗಳಿದ್ದು, ಇವರಲ್ಲಿ ಜೈ ಕಿಶನ್ ರೂಡಿ ಸೇರಿದ್ದಾರೆ.

ಜಗರಾವ್ʼನಿಂದ ಸರ್ವಜಿತ್ ಕೌರ್ ಮನೋಕೆ, ನಿಹಾಲ್ ಸಿಂಗ್ ವಾಲಾದಿಂದ ಮಂಜಿತ್ ಬಿಲಾಸ್ ಪುರ್, ಕೋಟಕ್ ಪುರದಿಂದ ಕುಲ್ತರ್ ಸಿಂಗ್ ಸಂಧ್ವಾನ್, ತಲ್ವಾಂಡಿ ಸಾಬೊದಿಂದ ಬಲ್ಜಿಂದರ್ ಕೌರ್, ಬುಧಾಲದ ಪ್ರಿನ್ಸಿಪಾಲ್ ಬುಧ್ರಾಮ್, ದಿರ್ಬಾದಿಂದ ಹರ್ಪಾಲ್ ಸಿಂಗ್ ಚೀಮಾ, ಸುನಮ್ʼನಿಂದ ಅಮನ್ ಅರೋರಾ, ಬರ್ನಾಲಾದಿಂದ ಗುರ್ಮೀತ್ ಸಿಂಗ್, ಮೆಹಾಲ್ ಕಲಾನ್ʼನಿಂದ ಕುಲವಂತ್ ಪಾಂಡೋರಿ ಸೇರಿದ್ದಾರೆ.‌