Thursday, 12th December 2024

ಆಪ್‌ನಿಂದ 7.08 ಕೋಟಿ ರೂ. ವಿದೇಶಿ ನಿಧಿ ಸ್ವೀಕಾರ: ಜಾರಿ ನಿರ್ದೇಶನಾಲಯ

ವದೆಹಲಿ : ಎಎಪಿ 2014 ರಿಂದ 2022 ರವರೆಗೆ 7.08 ಕೋಟಿ ರೂ.ಗಳನ್ನ ವಿದೇಶಿ ನಿಧಿಯಾಗಿ ಸ್ವೀಕರಿಸಿದೆ. ಇದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA), ಜನ ಪ್ರಾತಿನಿಧ್ಯ ಕಾಯ್ದೆ (RPA) ಮತ್ತು ಭಾರತೀಯ ದಂಡ ಸಂಹಿತೆ (IPC) ಅನ್ನು ಉಲ್ಲಂಘಿಸಿದಂತಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದೆ.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಇಡಿಯ ಆರೋಪಗಳನ್ನ ತಳ್ಳಿಹಾಕಿದ್ದು, ಇದು ಪಕ್ಷವನ್ನ ದೂಷಿಸುವ ರಾಜಕೀಯ ಪಿತೂರಿ ಎಂದು ಪ್ರತಿಪಾದಿಸಿದೆ.

ಯುಎಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಯುಎಇ, ಕುವೈತ್ ಮತ್ತು ಒಮಾನ್ ಸೇರಿದಂತೆ ದೇಶಗಳಲ್ಲಿ ಎಎಪಿ ಅನೇಕ ದಾನಿಗಳಿಂದ ಹಣವನ್ನು ಸ್ವೀಕರಿಸಿದೆ ಎಂದು ಇಡಿ ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದೆ.

ಎಎಪಿ ಶಾಸಕ ದುರ್ಗೇಶ್ ಪಾಠಕ್ ಸೇರಿದಂತೆ ಕೆಲವರು 2016 ರಲ್ಲಿ ಕೆನಡಾದಲ್ಲಿ ನಿಧಿ ಸಂಗ್ರಹ ಕಾರ್ಯಕ್ರಮದ ಸಮಯದಲ್ಲಿ ಸಂಗ್ರಹಿಸಿದ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ.